ಎಸ್‌ ಬಿಐ (SBI) ಡೇಟಾ ಸೋರಿಕೆ ಶಂಕೆ: ಡಾರ್ಕ್ ವೆಬ್‌ ನಲ್ಲಿ 3.75 ಲಕ್ಷ ದಾಖಲೆಗಳು ಪತ್ತೆ, ತನಿಖೆಗೆ ಆದೇಶ - Mahanayaka

ಎಸ್‌ ಬಿಐ (SBI) ಡೇಟಾ ಸೋರಿಕೆ ಶಂಕೆ: ಡಾರ್ಕ್ ವೆಬ್‌ ನಲ್ಲಿ 3.75 ಲಕ್ಷ ದಾಖಲೆಗಳು ಪತ್ತೆ, ತನಿಖೆಗೆ ಆದೇಶ

sbi
21/10/2026

ದೇಶದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್‌ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರ ಮಾಹಿತಿ ಸೋರಿಕೆಯಾಗಿರುವ ಶಂಕೆಯನ್ನು ವ್ಯಕ್ತಪಡಿಸಿದ್ದು, ಈ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಡಾರ್ಕ್ ವೆಬ್‌ ನಲ್ಲಿ ಸುಮಾರು 3.75 ಲಕ್ಷ (3,75,000) ದಾಖಲೆಗಳು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ಡಾರ್ಕ್ ವೆಬ್‌ ನಲ್ಲಿ ಲಭ್ಯವಿರುವ ಸುಮಾರು 3.75 ಲಕ್ಷ ದಾಖಲೆಗಳ ಪ್ರಾಥಮಿಕ ವಿಶ್ಲೇಷಣೆಯ ಪ್ರಕಾರ, ಒಟ್ಟು 3,897 ಗ್ರಾಹಕರ ವೈಯಕ್ತಿಕ ಮಾಹಿತಿ (PII) ನೇರವಾಗಿ ಬಹಿರಂಗಗೊಂಡಿರುವುದು ಪತ್ತೆಯಾಗಿದೆ ಎಂದು ಬ್ಯಾಂಕ್ ತಿಳಿಸಿದೆ.

ಬಹಿರಂಗಗೊಂಡಿರುವ ಮಾಹಿತಿಯಲ್ಲಿ ಗ್ರಾಹಕರ ಹೆಸರು, ನೋಂದಾಯಿತ ಮೊಬೈಲ್ ಸಂಖ್ಯೆಗಳು, ಹುಟ್ಟಿದ ದಿನಾಂಕ, ಲಿಂಗ, ಇಮೇಲ್ ವಿಳಾಸಗಳು, ವಾಸಸ್ಥಳದ ವಿಳಾಸಗಳು, ಬ್ಯಾಂಕ್ ಶಾಖೆಯ ವಿವರಗಳು, ಗ್ರಾಹಕ ಮಾಹಿತಿ ಫೈಲ್ (CIF) ಗುರುತುಗಳು ಮತ್ತು ಸಾಲಕ್ಕೆ ಸಂಬಂಧಿಸಿದ ದಾಖಲೆಗಳು ಸೇರಿವೆ.

ಅಕ್ಟೋಬರ್ 16 ರಂದು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT–In), ರಕ್ಷಣಾ ಸೈಬರ್ ಏಜೆನ್ಸಿ (Defence Cyber Agency) ಹಾಗೂ ಬ್ಯಾಂಕಿನ ಸ್ವಂತ ಥ್ರೆಟ್ ಇಂಟೆಲಿಜೆನ್ಸ್ ಸೇವಾ ಪೂರೈಕೆದಾರರಿಂದ ಈ ಸೈಬರ್ ಆಪಾದನೆಯ ಬಗ್ಗೆ ಎಸ್‌ಬಿಐಗೆ ಎಚ್ಚರಿಕೆ ಸಿಕ್ಕಿತ್ತು.

ಈ ವರದಿಗಳ ಹಿನ್ನೆಲೆಯಲ್ಲಿ ಎಸ್‌ ಬಿಐ ಷೇರುಪೇಟೆಗಳಿಗೆ (Stock Exchanges) ಮಾಹಿತಿ ನೀಡಿ, ತಕ್ಷಣವೇ ಸೈಬರ್ ಘಟನೆ ಪ್ರತಿಕ್ರಿಯೆ ಮತ್ತು ನಿಯಂತ್ರಣ ಪ್ರೋಟೋಕಾಲ್‌ ಗಳನ್ನು ಸಕ್ರಿಯಗೊಳಿಸಿದೆ. ಸೋರಿಕೆಯ ಮೂಲ, ವ್ಯಾಪ್ತಿ ಹಾಗೂ ದತ್ತಾಂಶದ ಪ್ರಾಮಾಣಿಕತೆಯನ್ನು ಪರಿಶೀಲಿಸಲು CERT–In ನಿಂದ ಅನುಮೋದಿಸಲ್ಪಟ್ಟ ಸ್ವತಂತ್ರ ಸೈಬರ್ ಭದ್ರತಾ ಏಜೆನ್ಸಿಯನ್ನು ನಿಯೋಜಿಸಲಾಗಿದೆ.

ಈ ಸೈಬರ್ ಭದ್ರತಾ ಘಟನೆಯಿಂದ ಬ್ಯಾಂಕಿನ ಪ್ರಮುಖ ವ್ಯವಹಾರಗಳು, ಹಣಕಾಸಿನ ಕಾರ್ಯಕ್ಷಮತೆ ಅಥವಾ ದೈನಂದಿನ ಸೇವೆಗಳ ಮೇಲೆ ಯಾವುದೇ ಗಂಭೀರ ಪರಿಣಾಮ ಬೀರಿಲ್ಲ ಎಂದು ಎಸ್‌ ಬಿಐ ಸ್ಪಷ್ಟಪಡಿಸಿದೆ.

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler