ತೆಲಂಗಾಣ ವಿಧಾನಸಭಾ ಚುನಾವಣೆ: ಹೈದರಾಬಾದ್‌ನಲ್ಲಿ ಮತ ಚಲಾಯಿಸಿದ ನಟ ಚಿರಂಜೀವಿ, ಜೂನಿಯರ್ ಎನ್ಟಿಆರ್, ಅಲ್ಲು ಅರ್ಜುನ್  - Mahanayaka

ತೆಲಂಗಾಣ ವಿಧಾನಸಭಾ ಚುನಾವಣೆ: ಹೈದರಾಬಾದ್‌ನಲ್ಲಿ ಮತ ಚಲಾಯಿಸಿದ ನಟ ಚಿರಂಜೀವಿ, ಜೂನಿಯರ್ ಎನ್ಟಿಆರ್, ಅಲ್ಲು ಅರ್ಜುನ್ 

30/11/2023

ಹೈದರಾಬಾದ್‌ನ ಜುಬಿಲಿ ಪ್ರದೇಶದಲ್ಲಿ ಗುರುವಾರ ನಡೆಯುತ್ತಿರುವ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ನಟ ಚಿರಂಜೀವಿ ಕುಟುಂಬ ಸಮೇತರಾಗಿ ಆಗಮಿಸಿದರು. ಕಪ್ಪು ಬಟ್ಟೆಯಲ್ಲಿ ಸುಂದರವಾಗಿ ಕಾಣುತ್ತಿದ್ದ ನಟ ತಮ್ಮ ವಾಹನದಿಂದ ಇಳಿದು ಮತಗಟ್ಟೆಯತ್ತ ತೆರಳಿದರು.

ಇದಕ್ಕೂ ಮುನ್ನ ನಟ ಅಲ್ಲು ಅರ್ಜುನ್ ಬಿಎಸ್ಎನ್ಎಲ್ ಕೇಂದ್ರದ ಮತಗಟ್ಟೆ ಸಂಖ್ಯೆ 153 ರಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಅಲ್ಲು ಬಿಳಿ ಟೀ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದರು.

ನಟ ಜೂನಿಯರ್ ಎನ್ಟಿಆರ್ ಕೂಡ ಕುಟುಂಬದೊಂದಿಗೆ ಹೈದರಾಬಾದ್ ನ ಮತಗಟ್ಟೆಗೆ ಆಗಮಿಸಿದರು. ತೆಲಂಗಾಣದ ಎಲ್ಲಾ 119 ವಿಧಾನಸಭಾ ಕ್ಷೇತ್ರಗಳಲ್ಲಿ ಗುರುವಾರ ಬೆಳಿಗ್ಗೆ ವ್ಯಾಪಕ ಭದ್ರತೆಗಳ ನಡುವೆ ಮತದಾನ ಪ್ರಾರಂಭವಾಯಿತು. ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೆ ನಡೆಯಲಿದೆ. 109 ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳಿಂದ 221 ಮಹಿಳೆಯರು ಮತ್ತು ಒಬ್ಬ ತೃತೀಯ ಲಿಂಗಿ ಸೇರಿದಂತೆ 2,290 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅವರ ಹಣೆಬರಹವನ್ನು ಒಟ್ಟು 3.17 ಕೋಟಿ ಮತದಾರರು ನಿರ್ಧರಿಸಲಿದ್ದಾರೆ. ಒಟ್ಟು 103 ಶಾಸಕರು ಈ ಬಾರಿ ಮತ್ತೆ ಸ್ಪರ್ಧಿಸುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಆಡಳಿತಾರೂಢ ಭಾರತ ರಾಷ್ಟ್ರ ಸಮಿತಿ (ಬಿಆರ್ ಎಸ್) ಯಿಂದ ಸ್ಪರ್ಧಿಸಿದ್ದಾರೆ.

ಇತ್ತೀಚಿನ ಸುದ್ದಿ