ತೂಕ ಇಳಿಸಲು ಟ್ರೈ ಮಾಡ್ತಾ ಇದ್ದೀರಾ?:  ಚೀಯಾ ಬೀಜಗಳನ್ನು ಸೇವಿಸಿ ನೋಡಿ - Mahanayaka

ತೂಕ ಇಳಿಸಲು ಟ್ರೈ ಮಾಡ್ತಾ ಇದ್ದೀರಾ?:  ಚೀಯಾ ಬೀಜಗಳನ್ನು ಸೇವಿಸಿ ನೋಡಿ

chia seeds
02/06/2024

ಚೀಯಾ ಬೀಜಗಳು ದೇಹದ ಒಟ್ಟಾರೆ ಆರೋಗ್ಯವನ್ನು ಕಾಪಾಡಲು ಬೇಕಾದ ಅಗತ್ಯ ಪೋಷಕಾಂಶಗಳನ್ನು ಹೊಂದಿದೆ. ಸಲಾಡ್‌ಗಳು, ಸ್ಮೂಥಿಗಳು, ಮಿಲ್ಕ್ ಶೇಕ್‌ಗಳು, ಐಸ್‌ಕ್ರೀಮ್‌ಗಳು, ಬ್ರೇಕ್‌ ಫಾಸ್ಟ್ ಖಾದ್ಯಗಳ ಜೊತೆಗೆ ಇದನ್ನು ಸಾಮಾನ್ಯವಾಗಿ ಸೇವನೆ ಮಾಡುತ್ತಾರೆ.  ದೇಹದ ತೂಕ ಇಳಿಸಬೇಕು ಅಂತ ಅಂದುಕೊಂಡವರಿಗೆ ಇದು ಉತ್ತಮ ಆಯ್ಕೆಯಾಗಿದೆ.


Provided by

ತೂಕ ನಷ್ಟ ಮಾಡುವಲ್ಲಿ ಚಿಯಾ ಬೀಜಗಳ ಕೊಡುಗೆ ಏನು ಎಂಬುದನ್ನು ತಿಳಿದುಕೊಳ್ಳೋಣ:

ಪೋಷಕಾಂಶಗಳಿಂದ ಸಮೃದ್ಧ: ಚಿಯಾ ಬೀಜಗಳು ಒಮೆಗಾ 3 ಕೊಬ್ಬಿನಾಮ್ಲಗಳು, ನಾರಿನಾಂಶ, ಪ್ರೊಟೀನ್, ಕ್ಯಾಲ್ಸಿಯಂ, ಮ್ಯಾಂಗನೀಸ್, ಮೆಗ್ನಿಷಿಯಂ ಹಾಗೂ ಫಾಸ್ಪರಸ್ ಸೇರಿದಂತೆ ವಿವಿಧ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ.


Provided by

ಅಗಾಧ ಪ್ರಮಾಣದ ನಾರಿನಾಂಶ: ಚಿಯಾ ಬೀಜಗಳಲ್ಲಿ ಫೈಬರ್ ಪ್ರಮಾಣ ಅತ್ಯುತ್ತಮವಾಗಿ ಇರುತ್ತದೆ. ಇದನ್ನು ಸೇವಿಸಿದ ಬಳಿಕ ನಿಮಗೆ ಪರಿಪೂರ್ಣತೆಯ ಭಾವ ಉಂಟಾಗುತ್ತದೆ. ಇದರಿಂದ ದಿನವಿಡೀ ನಿಮ್ಮ ಒಟ್ಟಾರೆ ಕ್ಯಾಲೋರಿ ಸೇವನೆ ಪ್ರಮಾಣ ಕಡಿಮೆಯಾಗಲಿದೆ. ಇದರಿಂದ ತೂಕ ಇಳಿಕೆ ಸುಲಭವಾಗಿದೆ.

ಜೀರ್ಣಕ್ರಿಯೆಗೆ ಉತ್ತೇಜನ: ಇದರಲ್ಲಿ ನಾರಿನಾಂಶ ಅಂಶವು ಹೆಚ್ಚಾಗಿ ಇರುವುದರಿಂದ ನಿಯಮಿತವಾಗಿ ಕರುಳಿನ ಚಲನೆಗೆ ಉತ್ತೇಜನ ನೀಡುತ್ತದೆ. ಅಲ್ಲದೇ ಮಲಬದ್ಧತೆ ಕೂಡ ನಿವಾರಣೆಯಾಗುತ್ತದೆ. ಜೀರ್ಣಕ್ರಿಯೆ ಸರಾಗವಾಗಿ ನಡೆಯಲು ಚಿಯಾ ಬೀಜಗಳು ಪ್ರಮುಖ ಪಾತ್ರ ವಹಿಸುತ್ತವೆ.

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ: ಚಿಯಾಬೀಜಗಳು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಚಿಯಾ ಬೀಜಗಳು ನಿಮಗೆ ಹೊಟ್ಟೆ ತುಂಬಿದ ಭಾವವನ್ನು ನೀಡುವುದರಿಂದ ನಿಮಗೆ ಅನಗತ್ಯ ಜಂಕ್ ಫುಡ್‌ ಗೂ ಸಕ್ಕರೆಯಂಶಯುಕ್ತ ಪಾನೀಯಗಳನ್ನು ಸೇವಿಸಬೇಕು ಎಂಬ ಭಾವನೆ ಮೂಡುವುದಿಲ್ಲ.

ನೀರಿನಾಂಶ ಸಮತೋಲನ: ಚಿಯಾ ಬೀಜಗಳನ್ನು ನೀವು ನೀರಿನಲ್ಲಿ ನೆನೆಸಿದಾಗ ಇವುಗಳು ಅಗಾಧ ಪ್ರಮಾಣದ ನೀರನ್ನು ತಮ್ಮೆಡೆಗೆ ಹೀರಿಕೊಂಡಿರುತ್ತವೆ. ಹೀಗಾಗಿ ಇವುಗಳನ್ನು ನೀವು ಸೇವನೆ ಮಾಡುವುದರಿಂದ ನಿಮ್ಮ ದೇಹ ಹೈಡ್ರೀಕರಣಗೊಳ್ಳುತ್ತದೆ. ಇದರಿಂದ ನಿಮ್ಮ ದೈಹಿಕ ಸ್ವಾಸ್ಥ್ಯ ಕ್ಷೇಮವಾಗಿ ಇರುತ್ತದೆ.

ಶಕ್ತಿ: ಚಿಯಾ ಬೀಜಗಳಲ್ಲಿ ಅಡಕವಾಗಿರುವ ಪ್ರೊಟೀನ್, ಫೈಬರ್ ಹಾಗೂ ಆರೋಗ್ಯಕರ ಕೊಬ್ಬಿನ ಸಂಯೋಜನೆಯು ದೇಹಕ್ಕೆ ನಿರಂತರ ಶಕ್ತಿಯನ್ನು ಒದಗಿಸುತ್ತದೆ. ಇದರಿಂದ ನಿಮ್ಮ ಇಡೀ ದಿನ ಆರೋಗ್ಯಕರವಾಗಿ ಇರಲಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ