ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಕಹಳೆ: ವಿವಿಧ ಮುಸ್ಲಿಂ ಸಂಘಟನೆಗಳ ಪ್ರತಿಭಟನೆ
ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ತಮಿಳುನಾಡಿನ ವಿವಿಧ ಮುಸ್ಲಿಂ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಬೃಹತ್ ಪ್ರತಿಭಟನೆ ನಡೆಸಿವೆ. ಚೆನ್ನೈ ಯ ರಾಜರತ್ನಂ ಸ್ಟೇಡಿಯಂನಲ್ಲಿ ಈ ಪ್ರತಿಭಟನೆ ನಡೆಯಿತು.
ಮನಿದನೆಯೆ ಮಕ್ಕಳ ಕಚ್ಚಿ ಪಕ್ಷದ ಅಧ್ಯಕ್ಷ ಮತ್ತು ಶಾಸಕ ಜವಾಹಿರುಲ್ಲಾ ಈ ಕುರಿತಂತೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ವಖ್ಫ್ ತಿದ್ದುಪಡಿ ಮಸೂದೆಯ ಬಗ್ಗೆ ದೇಶಾದ್ಯಂತ ಪ್ರತಿಕ್ರಿಯೆಯನ್ನು ಕೇಳಿರುವ ಕೇಂದ್ರ ಸರಕಾರದ ನಿರ್ಧಾರವೇ ಅತ್ಯಂತ ಅಸಮರ್ಪಕ ಎಂದವರು ಹೇಳಿದ್ದಾರೆ. ಇದು ಜನರ ತೆರಿಗೆಯ ಲೂಟಿಯಾಗಿದೆ ಎಂದು ಕೂಡ ಅವರು ಹೇಳಿದ್ದಾರೆ.
ವಕ್ಫ್ ತಿದ್ದುಪಡಿ ಮಸೂದೆಯೇ ಆ ವಾಸ್ತವಿಕ ಮತ್ತು ಅನಗತ್ಯವಾಗಿರುವಾಗ ಅದರ ಹೆಸರಲ್ಲಿ ಜೆಪಿಸಿಯನ್ನು ರಚಿಸಿರುವುದು ಮತ್ತು ದೇಶದಾದ್ಯಂತ ಜನರಿಂದ ಪ್ರತಿಕ್ರಿಯೆಯನ್ನು ಕೇಳಿರುವುದೇ ಅಸಮರ್ಪಕ ಮತ್ತು ಅತಿರೇಕ ಎಂದವರು ಹೇಳಿದ್ದಾರೆ.

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by
ವಕ್ಫ್ ತಿದ್ದುಪಡಿ ಮಸೂದೆಯನ್ನು ಪರಿಶೀಲಿಸುವುದಕ್ಕಾಗಿ ಕೇಂದ್ರ ಸರಕಾರ 31 ಮಂದಿಯ ಜಾಯಿಂಟ್ ಪಾರ್ಲಿಮೆಂಟರಿ ಕಮಿಟಿಯನ್ನು ರಚಿಸಿದ್ದು ಇದರಲ್ಲಿ 21 ಮಂದಿ ಲೋಕಸಭಾ ಸದಸ್ಯರು ಮತ್ತು 10 ಮಂದಿ ರಾಜ್ಯಸಭಾ ಸದಸ್ಯರು ಇದ್ದಾರೆ. ಈ ಪ್ರತಿಭಟನಾ ಸಭೆಯಲ್ಲಿ ಮುಸ್ಲಿಂ ಪರ್ಸನಲ್ ಬೋರ್ಡ್ ನ ಅಧ್ಯಕ್ಷ ಖಾಲಿದ್ ಸೈಫುಲ್ಲಾ ರಹಮನಿ, ಡಿಎಂಕೆ ಸಂಸದೆ ಕನಿಮೋಳಿ, ಕಾಂಗ್ರೆಸ್ ಎಂಪಿ ಶಶಿಕಾಂತ್ ಸೆಂಥಿಲ್, ವಿಸಿಕೆ ಅಧ್ಯಕ್ಷ ತಿರುಮಲವನ್ ಮತ್ತು ಇನ್ನಿತರ ಪ್ರಮುಖ ನಾಯಕರು ಭಾಗಿಯಾಗಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth




























