ಮಹಾನಾಯಕ ಧಾರಾವಾಹಿಗೆ ವೋಟ್ ಮಾಡಲು ಯಾಕೆ ಸಾಧ್ಯವಾಗುತ್ತಿಲ್ಲ? | ಕಾರಣ ಬಯಲು - Mahanayaka
3:48 PM Thursday 12 - September 2024

ಮಹಾನಾಯಕ ಧಾರಾವಾಹಿಗೆ ವೋಟ್ ಮಾಡಲು ಯಾಕೆ ಸಾಧ್ಯವಾಗುತ್ತಿಲ್ಲ? | ಕಾರಣ ಬಯಲು

24/10/2020

ಜೀ ಕನ್ನಡ ಕುಟುಂಬ ಅವಾರ್ಡ್- 2020ಗೆ ಟಿವಿಯ ವಿವಿಧ ಕಾರ್ಯಕ್ರಮಗಳಿಗೆ ಓಟ್ ಮಾಡಲು ಜೀ ಕನ್ನಡ ಕೋರಿದೆ. ಆದರೆ ಪ್ರಮುಖ ಧಾರಾವಾಹಿ, ಡಬ್ಬಿಂಗ್ ಧಾರಾವಾಹಿ ಮಹಾನಾಯಕಕ್ಕೆ ಓಟು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮಹಾನಾಯಕ ಅಭಿಮಾನಿಗಳು ದೂರುತ್ತಿದ್ದಾರೆ.

ಎಲ್ಲ ಧಾರಾವಾಹಿಗಳ ಪೈಕಿ ಡಬ್ಬಿಂಗ್ ಧಾರಾವಾಹಿಗಳ ವಿಭಾಗದಲ್ಲಿರುವ ಮಹಾನಾಯಕ ಧಾರಾವಾಹಿಯಲ್ಲಿ ಮಹಾನಾಯಕ ಧಾರಾವಾಹಿಯನ್ನು ಆಯ್ಕೆ  ಮಾಡಿ ಸಬ್ಮಿಟ್ ಕೊಟ್ಟಾಗ ಅದು ಸಬ್ಮೀಟ್ ಆಗುತ್ತಿಲ್ಲ ಎಂದು ಮಹಾನಾಯಕ ಅಭಿಮಾನಿಗಳು ದೂರುತ್ತಿದ್ದಾರೆ.  

mahanayaka

ಮಹಾನಾಯಕ ವೀಕ್ಷಕರು ಇದೇ ಮೊದಲ ಬಾರಿಗೆ ಮಹಾನಾಯಕ ಧಾರಾವಾಹಿಯನ್ನು ಮಾತ್ರವೇ ನೋಡುತ್ತಿದ್ದಾರೆ. ಮತ್ತು ಟಿವಿ ಕಾರ್ಯಕ್ರಮಗಳ ಓಟಿಂಗ್ ನಲ್ಲಿಯೂ ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಜೀ ಕನ್ನಡ ನೀಡಿರುವ ಆಯ್ಕೆಗಳು ಗೊಂದಲವನ್ನುಂಟು ಮಾಡಿದೆ.


Provided by

ಜೀ ಕನ್ನಡದ ಓಟಿಂಗ್ ಸಿಸ್ಟಂ ಹೇಗಿದೆ ಗೊತ್ತಾ?

ಓಟಿಂಗ್ ನಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾಗುವ ವಿವಿಧ ವಿಭಾಗಗಳ ಎಲ್ಲ ಕಾರ್ಯಕ್ರಮಗಳನ್ನು ನೀಡಲಾಗಿದೆ. ನೀವು ಮಹಾನಾಯಕ ಧಾರಾವಾಹಿಗೆ ವೋಟ್ ಮಾಡಬೇಕಾದರೆ, ಮೊದಲು ಕೆಳಗೆ ಕಾಣಿಸುತ್ತಿರುವ ಚಿತ್ರದಲ್ಲಿ ಕೆಂಪು ಮಾರ್ಕ್ ಮಾಡಿರುವ ಸ್ಥಳಕ್ಕೆ ಕ್ಲಿಕ್ ಮಾಡಬೇಕು.

ವೋಟ್ ಮಾಡಲು ಲಿಂಕ್ ಗೆ ಕ್ಲಿಕ್ ಮಾಡಿ: https://zkka.zee5.com/games

ಚಿತ್ರ 2ರಲ್ಲಿ ನೀಡಿರುವಂತೆ ಅಲ್ಲಿ , ಕಾರ್ಯಕ್ರಮಗಳ ಲಿಸ್ಟ್ ಹಾಗೂ ಅದರಲ್ಲಿ ನಿಮ್ಮ ಆಯ್ಕೆ ಯಾವುದು ಎಂದು ನೀಡಲಾಗಿದೆ. ಅವುಗಳನ್ನು ಆಯ್ಕೆ ಮಾಡಿ. ಕೊನೆಯಲ್ಲಿ ಡಬ್ಬಿಂಗ್ ಸೀರಿಯಲ್ ಎಂದು ಇದೆ. ಅಲ್ಲಿ ನೀವು ಮಹಾನಾಯಕ ಧಾರಾವಾಹಿಗೆ ವೋಟ್ ಮಾಡಿ, ಸಬ್ಮೀಟ್ ಕೊಡಬೇಕು. ಅಲ್ಲಿಗೆ ನಿಮ್ಮ ವೋಟಿಂಗ್ ಪ್ರಕ್ರಿಯೆ ಮುಗಿಯುತ್ತದೆ.

ಮಹಾನಾಯಕ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ

https://t.me/joinchat/Q8oMxBZkakVUy7-VpEsIXQ

ಇತ್ತೀಚಿನ ಸುದ್ದಿ