ಅನುಮಾನಾಸ್ಪದ ಸಾವು | ಕೌಕ್ರಡಿಯ ಪೆರಿಯಶಾಂತಿ ಬಳಿ ಯುವಕನ ಮೃತದೇಹ ಪತ್ತೆ
20/11/2020
ಕೌಕ್ರಡಿ: ಬೆಂಗಳೂರು-ಮಂಗಳೂರು 75.NH ರಾಷ್ಟ್ರೀಯ ಹೆದ್ದಾರಿ ಕೌಕ್ರಡಿಯ ಪೆರಿಯಶಾಂತಿ ಎಂಬಲ್ಲಿ ಇಂದು ಅಪರಿಚಿತ ಯುವಕನ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ರಸ್ತೆ ಬದಿಯಲ್ಲಿ ಅಪರಿಚಿತ ಯುವಕನ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು. ವ್ಯಕ್ತಿಯ ಮುಖ ಸುಟ್ಟ ರೀತಿಯಲ್ಲಿದ್ದು, ತನಿಖೆಯ ಬಳಿಕವಷ್ಟೇ ಮೃತ ದೇಹದ ಮಾಹಿತಿ ತಿಳಿದು ಬರಬೇಕಾಗಿದೆ.
ಮೃತದೇಹವನ್ನು ಸದ್ಯ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ . ಮೃತ ದೇಹ ಪತ್ತೆಯಾದ ಸ್ಥಳಕ್ಕೆ ನೆಲ್ಯಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.