10 ರೂಪಾಯಿಗೆ ಬಿರಿಯಾನಿ ಮಾರಾಟ ಮಾಡಿದ ವ್ಯಕ್ತಿಯ ಬಂಧನ! - Mahanayaka

10 ರೂಪಾಯಿಗೆ ಬಿರಿಯಾನಿ ಮಾರಾಟ ಮಾಡಿದ ವ್ಯಕ್ತಿಯ ಬಂಧನ!

20/10/2020

ಕೊರೊನಾ ಸಂಕಷ್ಟದಿಂದ ವ್ಯಾಪಾರಿಗಳು ಕಂಗೆಟ್ಟಿದ್ದಾರೆ. ಈ ನಡುವೆ ತಮ್ಮ ವ್ಯಾಪಾರವನ್ನು ಹೇಗೆ ವೃದ್ಧಿ ಮಾಡಿಕೊಳ್ಳುವುದು ತಿಳಿಯದೇ ಗೊಂದಲದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ತಮಿಳುನಾಡಿನ ಅರುಪ್ಪುಕೊಟ್ಟಾಯಿಯ ವ್ಯಾಪಾರಿಯೊಬ್ಬ ಜನರನ್ನು ಸೆಳೆಯಲು 10 ರೂಪಾಯಿಗೆ ಬಿರಿಯಾನಿ ಘೋಷಿಸಿದ್ದಾನೆ. ಇದರಿಂದಾಗಿ ಆತ ಜೈಲುಪಾಲಾಗಿದ್ದಾನೆ.

ಝಾಹೀರ್ ಹುಸೇನ್ ಎಂಬ ವ್ಯಕ್ತಿ ತನ್ನ  ಹೊಟೇಲ್ ನಲ್ಲಿ ಬೆಳಗ್ಗೆ 11ರಿಂದ 1 ಗಂಟೆಯವರೆಗೆ 10 ರೂಪಾಯಿಗೆ ಬಿರಿಯಾನಿ ನೀಡುವುದಾಗಿ ಜಾಹೀರಾತು ನೀಡಿದ್ದಾನೆ. ಬಿರಿಯಾನಿ ಎಂದರೆ ಜನ ಸುಮ್ಮನಿರುತ್ತಾರೆಯೇ?  ಹುಸೇನ್ ಅವರ ಹೊಟೇಲ್ ಮುಂದೆ ಜಮಾಯಿಸಿ ಬಿಟ್ಟರು. ಇದರಿಂದಾಗಿ ಸರ್ಕಾರದ ಕೊವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆಯಾಗಿದ್ದು, ವ್ಯಕ್ತಿ ಅಂತರ ಯಾವುದೂ ಪಾಲನೆಯಾಗಿಲ್ಲ ಎಂದು ಪೊಲೀಸರು ಮಾಲಿಕ ಹುಸೇನ್ ನನ್ನು ಬಂಧಿಸಿದ್ದಾರೆ.

10 ರೂಪಾಯಿಗೆ ಬಿರಿಯಾನಿ ಕೊಡುತ್ತೇವೆ ಎಂದು ಹೇಳಿದ್ದೇ ತಡ ಹೊಟೇಲ್ ಮುಂದೆ ಸಾಲು ಸಾಲು ಜನ ಪ್ರತ್ಯಕ್ಷವಾಗಿದ್ದಾರೆ. ಹುಸೇನ್ 2500 ಪ್ಯಾಕ್ ಬಿರಿಯಾನಿ ರೆಡಿ ಮಾಡಿಕೊಂಡಿದ್ದು, ಅದರಲ್ಲಿ ಅರ್ಧ ಖಾಲಿಯಾಗುವಷ್ಟರಲ್ಲಿ ಪೊಲೀಸರು ಸ್ಥಳಕ್ಕೆ ಬಂದು ಬಂಧಿಸಿದ್ದಾರೆ. ಅಂಗಡಿ ಮುಂದೆ ಜನರು ವ್ಯಾಪಕವಾಗಿ ನೆರೆದ ಪರಿಣಾಮ ಟ್ರಾಫಿಕ್ ಜಾಮ್ ಕೂಡ ಆಗಿದೆ. ಇದರಿಂದಾಗಿ ಟ್ರಾಫಿಕ್ ಕಂಟ್ರೋಲ್ ಮಾಡಲು ಪೊಲೀಸರು ಹರಸಾಹಸಪಟ್ಟಿದ್ದಾರೆ.

ಇತ್ತೀಚಿನ ಸುದ್ದಿ