ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ಪುತ್ರಿಗೆ ಅತ್ಯಾಚಾರದ ಬೆದರಿಕೆ!
20/10/2020
ಶ್ರೀಲಂಕಾ: ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ಪುತ್ರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಾಚಾರದ ಬೆದರಿಕೆ ಹಾಕಿರುವ ನಡೆದಿದ್ದು, ಶ್ರೀಲಂಕಾ ಕ್ರಿಕೆಟ್ ಟೀಂನ ಮಾಜಿ ನಾಯಕ ಮುತ್ತಯ್ಯ ಮುರುಳೀಧರನ್ ಪಾತ್ರದಲ್ಲಿ ನಟಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕಿಡಿಗೇಡಿಯೊಬ್ಬ ಈ ಬೆದರಿಕೆ ಹಾಕಿದ್ದಾನೆ.
ಮುತ್ತಯ್ಯ ಮುರಳೀಧರನ್ ಜೀವನಾಧಾರಿತ ಚಿತ್ರ 800ಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಜಯ್ ಸೇತುಪತಿ ಆ ಸಿನಿಮಾದಿಂದ ಹೊರ ಬಂದಿದ್ದರು. ಇನ್ನೂ ಈ ಬಗ್ಗೆ ಅವರು ಮಾಡಿದ್ದ ಟ್ವೀಟ್ ಗೆ ಕಿಡಿಗೇಡಿಯೊಬ್ಬ ಪ್ರತಿಕ್ರಿಯಿಸಿ, ಅವರ ಪುತ್ರಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದಾನೆ.
ಇನ್ನೂ ಈ ಈ ಟ್ವೀಟ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಬೆದರಿಕೆ ಹಾಕಿರುವಾತನ ವಿರುದ್ಧ ತಕ್ಕ ಕ್ರಮವಾಗಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ಕೇಳಿ ಬಂದಿದೆ.
ಈ ಹಿಂದೆ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಪುತ್ರಿಗೂ ಇದೇ ರೀತಿಯಾಗಿ ಕಿಡಿಗೇಡಿಯೋರ್ವ ಬೆದರಿಕೆ ಹಾಕಿ ಜೈಲುಪಾಲಾಗಿದ್ದ.