ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊನೆಯ ಸಂದೇಶವನ್ನು ಪ್ರತಿಯೊಬ್ಬರು ತಿಳಿಯಬೇಕು - Mahanayaka
10:17 AM Thursday 12 - September 2024

ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊನೆಯ ಸಂದೇಶವನ್ನು ಪ್ರತಿಯೊಬ್ಬರು ತಿಳಿಯಬೇಕು

05/12/2020

ಅಂದು ಡಿಸೆಂಬರ್  6, 1956. ಇಡೀ ಭಾರತದಲ್ಲಿ ಕಣ್ಣೀರ ಕೋಡಿ ಹರಿದ ದಿನ. ಕತ್ತಲಲ್ಲಿದ್ದ ಭಾರತಕ್ಕೆ ಬೆಳಕಿನ ಕಿರಣ ನೀಡಿ, ವಿಶ್ವವೇ ಬೆರಗಾಗುವಂತೆ ಮಾಡಿದ್ದ, ಆಧುನಿಕ ಭಾರತದ ನಿರ್ಮಾತೃ, ಸಂವಿಧಾನ ಶಿಲ್ಪಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಿಬ್ಬಾಣ ಹೊಂದಿದ ದಿನ. ಭಾರತದ [www.mahanayaka.in] ಕಣ್ತೆರೆಸಿ, ಸಮಾನತೆಯ ಬೀಜ ಬಿತ್ತಿ ಹೋದ ಆ ಮಹಾನಾಯಕನ ಹೋರಾಟದ ಫಲವನ್ನು ಇಡೀ ಭಾರತವೇ ಇಂದು ಉಣ್ಣುತ್ತಿದೆ.

ಡಾ.ಬಿ.ಆರ್.ಅಂಬೇಡ್ಕರ್ ರವರು 14ನೇ ಏಪ್ರಿಲ್, 1891 ಮಧ್ಯಪ್ರದೇಶದ ಮಾಹೋ ಎಂಬ ಮಿಲಿಟರಿ ಕ್ಯಾಂಪ್ ನಲ್ಲಿ ಹುಟ್ಟಿದರು. ಈ ದೇಶವನ್ನು ಉತ್ತಮ ದಾರಿಗೆ ಕೊಂಡೊಯ್ಯಲೆಂದೇ ಅವರು ಈ ಭಾರತದಲ್ಲಿ ಜನಿಸಿದರು ಎಂದೇ ಹೇಳಬಹುದು. ಅಂಬೇಡ್ಕರ್ ಅವರು  ಭಾರತದಲ್ಲಿ ಜನಿಸದೇ ಇರುತ್ತಿದ್ದರೆ, ಇಂದು ಭಾರತದ ಪರಿಸ್ಥಿತಿ ಏನಾಗಿರುತ್ತಿತ್ತು ಎನ್ನುವುದನ್ನು [www.mahanayaka.in] ಯೋಚಿಸಲೂ ಸಾಧ್ಯವಾಗುತ್ತಿರಲಿಲ್ಲ. ಭಾರತದ ಬೀದಿಗಳಲ್ಲಿ ಚಿನ್ನ, ರತ್ನ, ವಜ್ರ ವೈಢೂರ್ಯಗಳನ್ನು ಮಾರಾಟ ಮಾಡಲಾಗುತ್ತಿತ್ತು ಎನ್ನುವ ಇತಿಹಾತಿಹಾಸವನ್ನು ನಾವು ಓದಿದ್ದೇವೆ. ಆದರೆ, ಅದೇ ಭಾರತದಲ್ಲಿ ಮನುಷ್ಯನನ್ನು ಮನುಷ್ಯನಂತೆ ಕಾಣಲಾಗುತ್ತಿರಲಿಲ್ಲ ಎನ್ನುವ ಸತ್ಯವನ್ನೂ ನಾವು ಒಪ್ಪಿಕೊಂಡಿದ್ದೇವೆ. ಇಂದು ಭಾರತದಲ್ಲಿ ಇಷ್ಟರ ಮಟ್ಟಿಗೆ ಸಮಾನತೆ, ನೆಮ್ಮದಿ ಇದೆ ಎಂದರೆ, ಅಂಬೇಡ್ಕರ್ ಅವರು ನೀಡಿದ ಪವಿತ್ರ ಸಂವಿಧಾನದಿಂದ ಮಾತ್ರವೇ ಅದು ಸಾಧ್ಯವಾಗಿದೆ. ಎಲ್ಲ ನಾಯಕರು ಬ್ರಿಟಿಷರಿಂದ ದೇಶಕ್ಕೆ ಸ್ವಾತಂತ್ರ ಸಿಗಬೇಕೆಂದು ಹೋರಾಟ ಮಾಡಿದರೆ, ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದೊಳಗೆ ಜನರು ಸ್ವತಂತ್ರವಾಗಿ ಬದುಕಬೇಕು ಎಂದು ಕನಸು ಕಂಡರು ಅದಕ್ಕಾಗಿ ಹೋರಾಟ ಮಾಡಿದರು. ಜಾತಿವಾದಿಗಳು, ಮನುವಾದಿಗಳ [www.mahanayaka.in] ನೂರಾರು ಸಂಚನ್ನು ಮುರಿದು, ಪವಿತ್ರವಾದ ಸಂವಿಧಾನವನ್ನು ಈ ದೇಶಕ್ಕೆ ಅರ್ಪಿಸಿದರು. ಭಾರತವು ಎರಡು ಹೋಳಾಗಿ ಭಾರತ-ಪಾಕಿಸ್ತಾನವಾದಾಗ ಅಂಬೇಡ್ಕರ್ ಅವರು ಕೂಡ, ನಮಗೂ ಪ್ರತ್ಯೇಕ ರಾಷ್ಟ್ರ ಬೇಕು ಎಂದು ಹೋರಾಡಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಯಾಕೆಂದರೆ, ಅಂಬೇಡ್ಕರ್ ಅವರಂತಹ ರಾಷ್ಟ್ರವಾದಿ ಇಂದಿಗೂ ಯಾರೂ ಇಲ್ಲ. ಮುಂದೆಯೂ ಬರಲು ಸಾಧ್ಯವಿಲ್ಲ ಅಂಬೇಡ್ಕರ್ ಅವರು ಅಪ್ಪಟ ದೇಶಪ್ರೇಮಿಯಾಗಿದ್ದರು. ಅವರು ರಾಷ್ಟ್ರದ ಬಗ್ಗೆ ಏನು ಹೇಳುತ್ತಿದ್ದರೆಂದರೆ, “ನಾನು ಮೊದಲನೆಯದಾಗಿ ಮತ್ತು ಕೊನೆಯದಾಗಿಯೂ ಇಂಡಿಯನ್”(ಭಾರತೀಯ).


Provided by

ಡಿಸೆಂಬರ್ 6 ಭಾರತ ದೇಶಕ್ಕೆ ದುಃಖದ ದಿನ. ಇಡೀ ಜಗ್ಗತ್ತು ಕಂಡಿರದ ಮಹಾಮಾನವತಾವಾದಿ, ಹೋರಾಟಗಾರ ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ [www.mahanayaka.in] ಕೊನೆಯ ದಿನಗಳ ಬಗ್ಗೆ Last few years of Dr. Ambedkar  ಎಂಬ ಕೃತಿಯಲ್ಲಿ ಅವರ ಆಪ್ತ ಕಾರ್ಯದರ್ಶಿ ನಾನಕ್ ಚಂದ್ ರತ್ತು ಅವರು ಬರೆದಿದ್ದಾರೆ.

ನಾನಕ್ ಚಂದ್ ರತ್ತು ಅವರಿಗೆ ಆ ದಿನ ಎಂದೂ ಮರೆಯದ ದಿನವಾಗಿತ್ತು. ಅಂದು 1956ರ ಜುಲೈ 31ರ ಮಂಗಳವಾರ. ಸಮಯ 5:30ರ ವೇಳೆಗೆ ನಾನಕ್ ಚಂದ್ ಕೆಲವು ಪತ್ರಗಳನ್ನು ಹೊಂದಿಸಿಡುತ್ತಿದ್ದರು.  ಆ ಸಮಯದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಸ್ವಸ್ಥರಾದರು. ಅದನ್ನು ಗಮನಿಸಿದ ರತ್ತು, [www.mahanayaka.in] ಅಂಬೇಡ್ಕರ್ ಅವರನ್ನು ವಿಚಾರಿಸಿದ ಬಳಿಕ, ಹೀಗೆ ಕೇಳಿದರು. “ ಸರ್…  ನೀವು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಖಿನ್ನತೆಗೆ ಒಳಗಾಗುತ್ತಿದ್ದೀರಿ, ಅದು ಯಾಕೆ ಎಂದು ನನಗೆ ತಿಳಿಯಬೇಕು ಎಂದು ಕೇಳುತ್ತಾರೆ.  ಅಂದು ಬಾಬಾ ಸಾಹೇಬರು ನೀಡಿರುವ ಉತ್ತರವನ್ನು ಇಂದು ಅವರ ಸಮುದಾಯ ಗಂಭೀರವಾಗಿ ತೆಗೆದುಕೊಂಡಿದ್ದರೆ, ಬಹುಶಃ ಇಂದಿಗೂ ದಲಿತ ಸಮುದಾಯ ಹಿಂದಿನ ಅದೇ ಸ್ಥಿತಿಯಲ್ಲಿ ಇರುತ್ತಿರಲಿಲ್ಲವೋ ಏನೋ…

ನಾನಕ್ ಚಂದ್ ರತ್ತು ಅವರ ಪ್ರಶ್ನೆಗೆ ಉತ್ತರಿಸಲು ಆರಂಭಿಸಿದ ಅಂಬೇಡ್ಕರರು, ನಾನು ಬದುಕಿರುವಾಗಲೇ ನನ್ನ ಜೀವನದ ಗುರಿಯನ್ನು ಮುಟ್ಟಲು ಸಾಧ್ಯವಾಗಲಿಲ್ಲ. ನನ್ನ ಜನರು ದೇಶದ ಆಳುವ ವರ್ಗವಾಗಬೇಕು ಎಂದು ನಾನು ಬಯಸಿದ್ದೆ. ರಾಜಕೀಯ ಅಧಿಕಾರವನ್ನು ಸಮಾನತೆಯ ಆಧಾರದಲ್ಲಿ ಹಂಚಿಕೊಳ್ಳಬೇಕು[www.mahanayaka.in] ಎಂದು ನಾನು ಬಯಸಿದ್ದೆ. ಆದರೆ ಅದರ ಸಾಧ್ಯತೆಗಳು ನನಗೆ ಗೋಚರಿಸುತ್ತಿಲ್ಲ. ನಾನೇ ಏನಾದರೂ ಮಾಡುತ್ತೇನೆ ಎಂದು ಮುಂದುವರಿಯ ಬೇಕೆಂದುಕೊಂಡರೆ, ನನ್ನನ್ನು ಅನಾರೋಗ್ಯ ಬಾಧಿಸುತ್ತಿದೆ. ಈ ಅನಾರೋಗ್ಯದ ಕಾರಣದಿಂದಾಗಿ ನಾನು ನಿಶ್ಯಕ್ತನಾಗಿದ್ದೇನೆ.  ನಾನು ಈವರೆಗೆ ಏನೆಲ್ಲ ಸಾಧಿಸಿದ್ದೇನೋ ಅದರ ಫಲವನ್ನು ಪಡೆದ ನನ್ನವರು ಕೆಲವೇ ಮಂದಿ ಅನುಭವಿಸುತ್ತಿದ್ದಾರೆ. ಶಿಕ್ಷಣ ಪಡೆದವರು  ವಂಚನೆ ಮಾಡಿಕೊಂಡು ಅಯೋಗ್ಯರಾಗಿದ್ದಾರೆ. ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನೇ ಸಾಧಿಸಿಕೊಂಡ ಇವರು ನನ್ನ ನಿರೀಕ್ಷೆಗಳನ್ನು ಸುಳ್ಳು ಮಾಡಿದ್ದಾರೆ. ಮೀಸಲಾತಿ ಪಡೆದುಕೊಂಡು ಸರ್ಕಾರಿ ಕೆಲಸ ಪಡೆದವರು ತಮ್ಮ ಸ್ವಾರ್ಥ ಸಾಧನೆಯನ್ನೇ ಮುಂದುವರಿಸಿಕೊಂಡು[www.mahanayaka.in] ಹೋಗುತ್ತಿದ್ದಾರೆ. ಸಮುದಾಯದ ಸೇವೆ ಮಾಡಲು ಯಾರೂ ಮುಂದೆ ಬರುತ್ತಿಲ್ಲ.  ಹಳ್ಳಿಗಳಲ್ಲಿ ಇನ್ನೂ ಜನರು ಶೋಷಣೆಯನ್ನು ಅನುಭವಿಸುತ್ತಿದ್ದಾರೆ.  ಆರ್ಥಿಕವಾಗಿ ದುಸ್ಥಿತಿಯಲ್ಲಿದ್ದಾರೆ.  ಈ ರೀತಿಯಾಗಿರುವ ಅನಕ್ಷರಸ್ಥ ವಿಶಾಲ ಜನಸಮುದಾಯದತ್ತ ಗಮನಹರಿಸಬೇಕು ಎಂದು ನಾನು ಯೋಚಿಸುತ್ತಿದೆ. ಆದರೆ, ನನಗೆ ಇರುವುದು ಇನ್ನು ಕೆಲವೇ ದಿನಗಳು ಎಂದು ಬಾಬಾ ಸಾಹೇಬರು ನೋವು ಪಟ್ಟರು.

ಅಂಬೇಡ್ಕರ್ ಅವರ ನೋವು ಇಂದಿಗೂ ನಿಜವೇ ಆಗಿದೆ ಅಲ್ಲವೇ? ಬಹಳಷ್ಟು ದಲಿತರು ಇಂದಿಗೂ ಉತ್ತಮ ಸ್ಥಿತಿವಂತರಾಗಿ ತಾವು, ತಮ್ಮ ಸಂಬಂಧಿಕರು ಎಂದೇ ನೋಡುತ್ತಿದ್ದಾರೆ. ತಮ್ಮ ಸಮುದಾಯದ ಒಂದಿಷ್ಟು ಮಕ್ಕಳನ್ನು ದತ್ತುಪಡೆದು ಅವರ ಶಿಕ್ಷಣಕ್ಕೆ ನೆರವು ನೀಡುವ ನೌಕರರು ಎಂದು ಎಷ್ಟು ಜನ ಇದ್ದಾರೆ [www.mahanayaka.in] ಎಂದು ಕೇಳಿದರೆ, ಕೇವಲ ಬೆರಳೆಣಿಕೆಯ ನೌಕರರು ಮಾತ್ರವೇ ಸಿಗುತ್ತಾರೆ. ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಲು ಸಹಾಯ ಮಾಡುವ ನೌಕರರು ಎಷ್ಟು ಜನರಿದ್ದಾರೆ ಎಂದು ಯೋಚಿಸಿದರೆ, ಅಲ್ಲಿಯೂ ಕೇವಲ ಬೆರಳೆಣಿಕೆಯ ಜನರು ಸಿಗುತ್ತಾರೆ. ಸಮರ್ಥರು ಕೈಕಟ್ಟಿ ಕುಳಿತಿದ್ದರೆ, ಸಾಧಾರಣ ಸ್ಥಿತಿವಂತರು ಇಂದು ಸಮಾಜ ಸುಧಾರಣೆ ಮಾಡಬೇಕು ಎಂದು ಹೊರಟಿದ್ದಾರೆ.  ಆದರೆ ಅವರಲ್ಲಿ ಶಕ್ತಿ ಇಲ್ಲ. ಇಂತಹ ಸ್ಥಿತಿಯಲ್ಲಿ ಇಂದು ಸಮುದಾಯ ಅಧೋಗತಿಯತ್ತ ಪ್ರಯಾಣಿಸುತ್ತಿದೆ. ಅಂಬೇಡ್ಕರ್ ಅವರು ಇಂತಹ ದುಸ್ಥಿತಿಯನ್ನು ನೆನೆದು ಅಂದು ಕಣ್ಣೀರು ಹಾಕಿದ್ದರು. ತನ್ನ ಸಮುದಾಯ ಆಳುವ ವರ್ಗವಾಗಬೇಕು. ಎಷ್ಟೋ ವರ್ಷಗಳಿಂದ ಭಾರತದಲ್ಲಿ  [www.mahanayaka.in]ಪ್ರಾಣಿಗಳಿಗಿಂತಲೂ ಕೀಳಾಗಿ ನಡೆಸಲಾಗಿದ್ದ ಅಸ್ಪೃಶ್ಯ ಸಮುದಾಯವನ್ನು  ಮೇಲೆತ್ತಬೇಕು, ಅವರು ಸ್ವಾಭಿಮಾನದಿಂದ ಬದುಕುವಂತಾಗಬೇಕು. ಅವರು ಸ್ವಾಭಿಮಾನದಿಂದ ಬದುಕುವಂತಾಗಬೇಕಾದರೆ ಅವರು ಆಳುವ ವರ್ಗವಾಗಬೇಕು ಎಂದು ಅವರು ನಿರೀಕ್ಷಿಸಿದ್ದರು. ಆದರೆ, ಸಮುದಾಯದಲ್ಲಿ ಅಭಿವೃದ್ಧಿ ಹೊಂದಿದವರು ಅವರ ಸ್ವಾರ್ಥವನ್ನು ಇಂದಿಗೂ ನೋಡುತ್ತಿದ್ದಾರೆಯೇ ಹೊರತು, ಸಮುದಾಯದ ಅಭಿವೃದ್ಧಿಗೆ ಅವರಿಂದ ಯಾವುದೇ ಸಹಾಯವೂ ಸಿಗುತ್ತಿಲ್ಲ. ಹೀಗಾಗಿಯೇ ಇಂದಿಗೂ  ಈ ಸಮುದಾಯದ ಬಡವರು  ಶೈಕ್ಷಣಿಕ ರಾಜಕೀಯವಾಗಿ ಮೇಲೆ ಬರಲಾಗದೇ ತನ್ನ ಸಮುದಾಯದ ಒಳಗೆಯೇ ನಿರ್ಲಕ್ಷ್ಯಕ್ಕೊಳಗಾಗಿದ್ದಾರೆ.

ಅಂಬೇಡ್ಕರ್ ಅವರು ತಮ್ಮ ಮನಸ್ಸಿನಲ್ಲಿದ್ದ ನೋವನ್ನು ರತ್ತು ಬಳಿಯಲ್ಲಿ ಹೇಳುತ್ತಾ,  “ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್”, “ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ”, ಹಿಂದೂ ಧರ್ಮದ ಒಗಟುಗಳು ಎನ್ನುವ ನನ್ನ ಎಲ್ಲಾ ಕೃತಿಗಳನ್ನು ಜೀವಿತಾವಧಿಯಲ್ಲಿಯೇ ಪ್ರಕಟಿಸಬೇಕು ಎಂದು ನಾನು ಬಯಸಿದ್ದೆ. ಆದರೆ ಅವುಗಳನ್ನು ಹೊರತರಲೂ ನನ್ನಿಂದ ಸಾಧ್ಯವಾಗುತ್ತಿಲ್ಲವಲ್ಲ, ಅದು ಮುಂದೆಂದಾದರೂ ಪ್ರಕಟವಾಗಬಹುದು ಎಂದು ನಾನು ಅಂದುಕೊಂಡರೂ ಆ ಸಾಧ್ಯತೆಗಳು ನನಗೆ ಕಾಣುತ್ತಿಲ್ಲ.  ನನ್ನ ಚಳುವಳಿಯನ್ನು ಶೋಷಿತ ಸಮುದಾಯದಿಂದ ಬಂದು  [www.mahanayaka.in]ಯಾರಾದರೂ ಮುನ್ನಡೆಸುತ್ತಾರೆ ಎಂದು ನಾನು ನಿರೀಕ್ಷಿಸಿದ್ದೆ. ಆದರೆ ಅಂತಹವರು ಯಾರೂ ನನಗೆ ಈ ಸಂದರ್ಭದಲ್ಲಿ ಕಾಣುತ್ತಿಲ್ಲ. ನಾನು ಯಾರ ಮೇಲೆ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೆನೋ, ಅವರು ಈ ಜವಾಬ್ದಾರಿಯ ಬಗ್ಗೆ ಗಮನ ಹರಿಸುತ್ತಿಲ್ಲ.  ಅವರು ನಾಯಕತ್ವಕ್ಕಾಗಿ, ಅಧಿಕಾರಕ್ಕಾಗಿ ತಮ್ಮಲೇ ಹೋರಾಡುತ್ತಿದ್ದಾರೆ. ನನ್ನ ದೇಶದ ಜನತೆಗೆ ಸೇವೆ ಸಲ್ಲಿಸುವ ಆಸೆ ನನಗೆ ಇನ್ನೂ ಇದೆ. ಪೂರ್ವಾಗ್ರಹ ಪೀಡಿತ ಜಾತಿ ಎಂಬ ರೋಗವನ್ನು ಅಂಟಿಸಿಕೊಂಡಿರುವ ಜನರೇ ಇಲ್ಲಿ ತುಂಬಿದ್ದಾರೆ. ಈ ದೇಶದಲ್ಲಿ  [www.mahanayaka.in]ನನ್ನಂತಹವರು ಜನಿಸುವುದು ಮಹಾಪಾಪ. ಹಾಗೆಯೇ ಈಗಿರುವ ವ್ಯವಸ್ಥೆಯಲ್ಲಿ ದೇಶಕ್ಕೆ ಸಂಬಂಧಪಟ್ಟಂತೆ ಯಾರಾದರೊಬ್ಬರು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಮಂಡಿಸುವುದು ತುಂಬಾ ಕಷ್ಟ. ಏಕೆಂದರೆ ಇಲ್ಲಿಯ ಜನರು ಈ ದೇಶದ ಪ್ರಧಾನಿ(ನೆಹರು)ಗೆ ಒಗ್ಗದಂತಹ ಯಾವುದೇ ವಿಚಾರಗಳನ್ನು ಕೇಳುವ ತಾಳ್ಮೆಯನ್ನು ಹೊಂದಿಲ್ಲ. ಈ ದೇಶ ಇನ್ನೆಲ್ಲಿಗೆ ಹೋಗಿ ಮುಳುಗುತ್ತದೆಯೋ ಎಂದು ಅವರು ಸಂಕಟ ಅನುಭವಿಸುತ್ತಾರೆ.

ಅಂಬೇಡ್ಕರ್ ಅವರ ಧ್ವನಿಯಲ್ಲಿ ಕಂಪನ ಆರಂಭವಾಗುತ್ತದೆ  “ಧೈರ್ಯ ತಂದುಕೋ ರತ್ತು, ನೀನು ಎದೆಗುಂದ ಬೇಡ, ಜೀವನ ಯಾವಗಲಾದರೂ ಕೊನೆಗೊಳ್ಳಲೇ ಬೇಕು.  ನನ್ನ ಜನರಿಗೆ ಹೇಳು ನಾನು ಇಲ್ಲಿಯವರೆಗೆ ಏನನ್ನು ಸಾಧಿಸಿದ್ದೇನೋ, ಅದನ್ನು ನನ್ನ ಶತ್ರುಗಳ ವಿರುದ್ಧ ಹೋರಾಡುತ್ತಾ, ಹಲವಾರು ಸಮಸ್ಯೆಗಳನ್ನು [www.mahanayaka.in] ಎದುರಿಸುತ್ತಾ, ನಿರಂತರವಾಗಿ ನೋವುಗಳ ಸರಮಾಲೆಯನ್ನೇ ಅನುಭವಿಸುತ್ತಾ ಸಾಧಿಸಿದ್ದೇನೆ. ಈ ವಿಮೋಚನ ರಥವನ್ನು ಈಗ ಅದು ಎಲ್ಲಿದೆಯೋ ಅಲ್ಲಿಯವರೆಗೆ ತಂದಿದ್ದೇನೆ. ಏನೇ  ಆದರೂ  ಈ ರಥ ಮುನ್ನಡೆಯಲೇ ಬೇಕು. ರಥವನ್ನು ಮುನ್ನಡೆಸಲು ಸಾಧ್ಯವಾಗದಿದ್ದರೆ. ಅದು ಎಲ್ಲಿದೆಯೋ ಅಲ್ಲಿಯೇ ಇರಲು ಬಿಡಿ. ಯಾವುದೇ ಕಾರಣಕ್ಕೂ ಅದನ್ನು ಹಿಂದಕ್ಕೆ ಸರಿಯಲು ಬಿಡಬೇಡಿ [www.mahanayaka.in] ಇದು ನನ್ನ ಕೊನೆಯ ಸಂದೇಶ, ಇದನ್ನು ನನ್ನ ಜನರಿಗೆ ತಲುಪಿಸು ಎಂದು ಹೇಳುತ್ತಾರೆ.  ಇದು ಅಂಬೇಡ್ಕರರ ಕೊನೆಯ ಮಾತುಗಳು. ಅಂದು ರತ್ತು ಜೊತೆಗೆ ಇಷ್ಟೆಲ್ಲ ಮಾತುಗಳನ್ನಾಡಿದ್ದ, ಡಾ.ಬಿ.ಆರ್.ಅಂಬೇಡ್ಕರ್ ಅವರು ನಿದ್ದೆಗೆ ಜಾರಿದ್ದರು. ಮರುದಿನ ಅಂಬೇಡ್ಕರ್ ಅವರು ಎದ್ದೇಳಲೇ ಇಲ್ಲ. ಅಂಬೇಡ್ಕರ್ ಅವರು ನಿಧನರಾಗಿದ್ದರು. ಇಡೀ ದೇಶವೇ ಸ್ತಬ್ಧವಾಗಿತ್ತು. ಅಂಬೇಡ್ಕರ್ ಅವರ ಕಾಲಿಗೆ ಅಡ್ಡವಾಗುತ್ತ, ಪ್ರತಿನಿತ್ಯ ತೊಂದರೆ ಕೊಡುತ್ತಿದ್ದ ದೊಡ್ಡ ದೊಡ್ಡ ನಾಯಕರು ಎನಿಸಿಕೊಂಡಿದ್ದವರೆಲ್ಲರೂ ಆ ದಿನ ಕಣ್ಣೀರು ಹಾಕಿದರು. ಅಂಬೇಡ್ಕರ್ ಎಂದರೆ ಅವರೊಂದು ವ್ಯಕ್ತಿಯಾಗಿರಲಿಲ್ಲ, ಅವರು ಈ ದೇಶದ  ಶಕ್ತಿಯಾಗಿದ್ದರು. ಅದು ಅಂದಿಗೂ ಇಂದಿಗೂ ಎಂದೆಂದಿಗೂ….

 

ಇತ್ತೀಚಿನ ಸುದ್ದಿ