ಬಾಡಿಗೆಗೆಂದು ಕರೆದ ವ್ಯಕ್ತಿ ಕಾಡಿನಲ್ಲಿ ಚಾಲಕನಿಗೆ ಇರಿದು ಪರಾರಿಯಾದ! - Mahanayaka
10:06 PM Monday 17 - November 2025

ಬಾಡಿಗೆಗೆಂದು ಕರೆದ ವ್ಯಕ್ತಿ ಕಾಡಿನಲ್ಲಿ ಚಾಲಕನಿಗೆ ಇರಿದು ಪರಾರಿಯಾದ!

02/11/2020

ಬೆಳ್ತಂಗಡಿ: ಬಾಡಿಗೆಯ ನೆಪದಲ್ಲಿ ಕರೆದು ಆಟೋ ಚಾಲಕನಿಗೆ ಚೂರಿಯಿಂದ ಇರಿದು ಹತ್ಯೆಗೆ ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ  ನಿಡಿಗಲ್ ಸೀಟು ಎಂಬಲ್ಲಿ ನಡೆದಿದೆ.


ಇಲ್ಲಿನ ಉಜಿರೆ ಗ್ರಾಮದ ಗುರಿಪಳ್ಳ ಮಾಳಿಗೆ ಮನೆ ನಿವಾಸಿ ಸದಾನಂದ(58) ಎಂಬವರನ್ನು ಹತ್ಯೆ ಮಾಡಲು ಯತ್ನಿಸಲಾಗಿದೆ. ಆರೋಪಿಯನ್ನು ಚಂದ್ರಶೇಖರ್ ಎಂದು ಗುರುತಿಸಲಾಗಿದ್ದು, ಈತ ಕೂಡ ಗುರಿಪಳ್ಳ ನಿವಾಸಿ ಎಂದು ತಿಳಿದು ಬಂದಿದೆ.


ಕೃತ್ಯದ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಾಳು ಸದಾನಂದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಯಾವ ಕಾರಣಕ್ಕೆ ಈ ದಾಳಿ ನಡೆದಿದೆ ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.


ಇತ್ತೀಚಿನ ಸುದ್ದಿ