ಉಜಿರೆ: ಬಾಲಕನ ಅಪಹರಣ ಪ್ರಕರಣಕ್ಕೆ ಟ್ವಿಸ್ಟ್ | ಬಾಲಕನ  ಅಪಹರಣಕ್ಕೆ ಸುಪಾರಿ ನೀಡಿದ್ದ ಆ ವ್ಯಕ್ತಿ ಯಾರು? - Mahanayaka
6:14 AM Thursday 7 - December 2023

ಉಜಿರೆ: ಬಾಲಕನ ಅಪಹರಣ ಪ್ರಕರಣಕ್ಕೆ ಟ್ವಿಸ್ಟ್ | ಬಾಲಕನ  ಅಪಹರಣಕ್ಕೆ ಸುಪಾರಿ ನೀಡಿದ್ದ ಆ ವ್ಯಕ್ತಿ ಯಾರು?

19/12/2020

ಮಂಗಳೂರು: ಉಜಿರೆಯ 8 ವರ್ಷದ ಬಾಲಕ ಅನುಭವ್ ನ ಅಪಹರಣಕ್ಕೆ ಸುಪಾರಿ ನೀಡಲಾಗಿದ್ದು,  ಸುಪಾರಿ ನೀಡಿರುವ ವ್ಯಕ್ತಿ ಬಿಜೋಯ್ ಅವರ ಕುಟುಂಬಕ್ಕೆ ಪರಿಚಯಸ್ಥ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಹೇಳಿದ್ದಾರೆ.

 ಸುದ್ದಿಗೋಷ್ಠಿಯಲ್ಲಿ ಈ ಸಂಬಂಧ ಮಾತನಾಡಿದ ಅವರು,  ಈ ಕುಟುಂಬದ ಬಗ್ಗೆ ಯಾರು ವಿಚಾರಿಸುತ್ತಿದ್ದರು ಎಂಬ ಬಗ್ಗೆ ನಾವು ಮಾಹಿತಿ ಸಂಗ್ರಹಿಸಿದ್ದು, ಈ ವೇಳೆ ನಮಗೆ ಮಾಹಿತಿ ಲಭ್ಯವಾಗಿತ್ತು. ಅದರ ಆಧಾರದಲ್ಲೂ ನಾವು ಪತ್ತೆ ಕಾರ್ಯ ಆರಂಭಿಸಿದ್ದೆವು. ನಮ್ಮ ನಾಲ್ಕು ತಂಡ ಹಾಸನ, ಬೆಂಗಳೂರು, ಮೂಡಿಗೆರೆ ಮತ್ತು ಮಧುಗಿರಿಯಲ್ಲಿ ಕಾರ್ಯಾಚರಣೆ ನಡೆಸಿದೆ. ಇದರಲ್ಲಿ ಮಧುಗಿರಿಯಲ್ಲಿ ನಮಗೆ ಒಂದಷ್ಟು ಸುಳಿವು ಸಿಕ್ಕಿತ್ತು. ಬಾಲಕನನ್ನು ಅಪಹರಿಸಿದ ತಂಡ ಸುಳ್ಯ, ಮಡಿಕೇರಿ, ಮಂಡ್ಯ ಮೂಲಕ ಕೋಲಾರ ತಲುಪಿದ್ದಾರೆ ಎಂದು ಅವರು ಹೇಳಿದರು.

ಈ ಪ್ರಕರಣದಲ್ಲಿ ಬಂಧಿತರಾದ 6 ಮಂದಿ ಆರೋಪಿಗಳನ್ನು ಕೋಲಾರದಲ್ಲಿ ಬಂಧಿಸಿದ್ದೇವೆ. ಈ ಆರು ಜನರು ಅಪಹರಣ ಮಾಡಿದ್ದಾರೆ. ಇವರಿಗೆ ಅನ್ಯ ವ್ಯಕ್ತಿಯೊಬ್ಬ 7 ಲಕ್ಷ ರೂಪಾಯಿಗಳನ್ನು ಸುಪಾರಿ ನೀಡಿದ್ದಾನೆ.  ಸುಪಾರಿ ನೀಡಿದ ವ್ಯಕ್ತಿ ಸಿಕ್ಕಿದ ಬಳಿಕ ಈ ಕೃತ್ಯದ ಹಿಂದಿನ ಉದ್ದೇಶ ತಿಳಿಯುತ್ತದೆ ಎಂದು ಹೇಳಿದ್ದಾರೆ.

 ಬಾಲಕನ ತಂದೆ ಕಳೆದ ಮೂರು ನಾಲ್ಕು ವರ್ಷಗಳ ಹಿಂದೆ ಬಿಟ್ ಕಾಯಿನ್ ನಲ್ಲಿ ಹೂಡಿಕೆ ಮಾಡಿದ್ದರು. ಅದನ್ನ ಸ್ವತಃ ಅವರೇ ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ. ಆದರೆ ಅದರ ಮೌಲ್ಯ ಕುಸಿದಾಗ ಬಿಟ್ ಕಾಯಿನ್ ಮಾರಾಟ ಮಾಡಿದ್ದಾರೆ ಅಂದಿದ್ದಾರೆ ಎಂದು ಎಸ್ ಪಿ ತಿಳಿಸಿದರು.

ಇತ್ತೀಚಿನ ಸುದ್ದಿ