ಸಿದ್ದರಾಮಯ್ಯ ಸೋಲಿಗೆ ಒಳಒಪ್ಪಂದ ಆಗಿದ್ದು ನಿಜ | ರಹಸ್ಯ ಬಹಿರಂಗ ಮಾಡಿದ ಜೆಡಿಎಸ್  ಶಾಸಕ - Mahanayaka

ಸಿದ್ದರಾಮಯ್ಯ ಸೋಲಿಗೆ ಒಳಒಪ್ಪಂದ ಆಗಿದ್ದು ನಿಜ | ರಹಸ್ಯ ಬಹಿರಂಗ ಮಾಡಿದ ಜೆಡಿಎಸ್  ಶಾಸಕ

19/12/2020

ಗುಬ್ಬಿ: ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಸೋಲಿಸಲು ಬೆಂಬಲ ನೀಡಿದ್ದು ನಿಜ. ಹಲವು ಕ್ಷೇತ್ರಗಳಲ್ಲಿ ಒಳ ಒಪ್ಪಂದವಾಗಿತ್ತು ಎನ್ನುವುದು ಕೂಡ ನಿಜ ಎಂದು ಜೆಡಿಎಸ್ ನ ಗುಬ್ಬಿ ಶಾಸಕ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.


Provided by

ಸಿದ್ದರಾಮಯ್ಯನವರು ತಮ್ಮ ಸೋಲಿಗೆ ಒಳಸಂಚು ನಡೆದಿತ್ತು ಎಂಬ ಹೇಳಿಕೆ ನೀಡಿದ ಬೆನ್ನಲ್ಲೇ  ವ್ಯಾಪಕವಾಗಿ ಇದು ಚರ್ಚೆಯಾಗಿದ್ದು,  ಈ ಹೇಳಿಕೆಯ ಬೆನ್ನಲ್ಲೇ  ಗುಬ್ಬಿ ಶಾಸಕ ಶ್ರೀನಿವಾಸ್ ಈ ಸ್ಫೋಟಕ ಹೇಳಿಕೆ ನೀಡಿದ್ದಾರೆ.  ಸಿದ್ದರಾಮಯ್ಯ ಸೋಲಿಗೆ ಬೆಂಬಲ ನೀಡಿದ್ದು ನಿಜ ಎಂದು ಶ್ರೀನಿವಾಸ್ ಹೇಳಿದ್ದಾರೆ.


Provided by

ಚಾಮುಂಡೇಶ್ವರಿ ಕ್ಷೇತ್ರ ಮಾತ್ರವಲ್ಲದೇ, ಹಲವು ಕ್ಷೇತ್ರಗಳಲ್ಲಿ ಒಳ ಒಪ್ಪಂದವಾಗಿತ್ತು. ಈ ಒಪ್ಪಂದ ಎಲ್ಲರಿಗೂ ಗೊತ್ತಿರುವಂತಹದ್ದೇ ಆಗಿದೆ. ಸಿದ್ದರಾಮಯ್ಯನವರಿಗೆ ಈಗ ಜ್ಞಾನೋದಯವಾಯಿತೇ? ಎಂದು ಅವರು ಇದೇ ಸಂದರ್ಭ ಪ್ರಶ್ನಿಸಿದರು.

ಇತ್ತೀಚಿನ ಸುದ್ದಿ