ಕೊನೆಗೂ ಶಾಲೆ-ಕಾಲೇಜು ಪುನರ್ ಆರಂಭಕ್ಕೆ ಅಂತಿಮ ನಿರ್ಧಾರ | ದಿನಾಂಕ ಘೋಷಣೆ - Mahanayaka

ಕೊನೆಗೂ ಶಾಲೆ-ಕಾಲೇಜು ಪುನರ್ ಆರಂಭಕ್ಕೆ ಅಂತಿಮ ನಿರ್ಧಾರ | ದಿನಾಂಕ ಘೋಷಣೆ

19/12/2020

ಬೆಂಗಳೂರು; ರಾಜ್ಯದಲ್ಲಿ ಜನವರಿ 1ರಿಂದ 10 ನೇ ತರಗತಿ ಹಾಗೂ 12ನೇ ತರಗತಿ ಶಾಲೆ ಆರಂಭಿಸಲು ತೀರ್ಮಾನಿಸಲಾದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.

ಈ ಸಂಬಂಧ ಯಡಿಯೂರಪ್ಪನವರು ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಅವರು ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಚಾರವನ್ನು ತಿಳಿಸಲಿದ್ದಾರೆ .  ಜನವರಿ 1ರಿಂದ 10 ಮತ್ತು 12ನೇ ತರಗತಿ ಆರಂಭಿಸಲಾಗುತ್ತಿದೆ. ಉಳಿದ ತರಗತಿಗಳಿಗೆ ಅಂದರೆ 1ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ಕಾರ್ಯಕ್ರಮದ ಮೂಲಕ ಶೈಕ್ಷಣಿಕ ಚಟುವಟಿಕೆ ಮುಂದುವರೆಸಲು ನಿರ್ಧರಿಸಲಾಗಿದೆ.

ಆರಂಭದಲ್ಲಿ 10 ಮತ್ತು 12ನೇ ತರಗತಿ ಶಾಲೆಗಳು ಪುನರಾರಂಭಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಕೊರೋನಾ ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ಪೋಷಕರ ಒಪ್ಪಿಗೆ ಪತ್ರ ಕಡ್ಡಾಯವಾಗಿದೆ. ಆನ್ ಲೈನ್ ಹಾಗೂ ಆಫ್ ಲೈನ್ ತರಗತಿಗಳಿಗೆ ವಿದ್ಯಾರ್ಥಿಗಳಿಗೆ ಹಾಜರಾಗುವುವ ಅವಕಾಶ ನೀಡಲಾಗಿದೆ.

ಇತ್ತೀಚಿನ ಸುದ್ದಿ