ಬಿಜೆಪಿ ಹಿರಿಯ ನಾಯಕ,  ಮಾಜಿ ಶಾಸಕ ನಿಧನ - Mahanayaka
2:58 AM Saturday 14 - September 2024

ಬಿಜೆಪಿ ಹಿರಿಯ ನಾಯಕ,  ಮಾಜಿ ಶಾಸಕ ನಿಧನ

05/01/2021

ಕಲಬುರಗಿ: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಶಾಸಕ, ಬಸವಂತರೆಡ್ಡಿ ಪಾಟೀಲ(88) ಸೋಮವಾರ ಜಿಲ್ಲೆಯ ಸೇಡಂ ತಾಲೂಕಿನ ಮೋತಕಪಲ್ಲಿ ಗ್ರಾಮದಲ್ಲಿ ನಿಧನರಾಗಿದ್ದಾರೆ.

ಪಾಟೀಲ  ತಮ್ಮ 88ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದು,  ತಮ್ಮ ಸ್ವಗ್ರಹದಲ್ಲಿಯೇ ಅವರು ನಿಧನರಾಗಿದ್ದಾರೆ. ಮೃತ ಅಂತ್ಯ ಕ್ರಿಯೆಯು ಇಂದು ನಡೆಯಲಿದ್ದು, ಗ್ರಾಮದಲ್ಲಿರುವ ಜಮೀನಿನಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ.

ಸೇಡಂ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಬಸವಂತರೆಡ್ಡಿ ಪಾಟೀಲ ಅವರು 1989 ಮತ್ತು 1999ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದು,ಜನಪ್ರತಿಯ ಶಾಸಕರಾಗಿದ್ದರು.


Provided by

ಇತ್ತೀಚಿನ ಸುದ್ದಿ