ಅಡುಗೆ ಅನಿಲ ಸರಬರಾಜು ಮಾಡುವವರಿಗೆ ಡೆಲಿವರಿ ಚಾರ್ಜ್ ನೀಡಬೇಕೆ? | ಇಲ್ಲಿದೆ ಮಾಹಿತಿ - Mahanayaka

ಅಡುಗೆ ಅನಿಲ ಸರಬರಾಜು ಮಾಡುವವರಿಗೆ ಡೆಲಿವರಿ ಚಾರ್ಜ್ ನೀಡಬೇಕೆ? | ಇಲ್ಲಿದೆ ಮಾಹಿತಿ

05/01/2021

ನವದೆಹಲಿ: ಅಡುಗೆ ಅನಿಲ ಸಿಲಿಂಡರ್ ಸರಬರಾಜು ಮಾಡುವವರಿಗೆ ಗ್ರಾಹಕರು ಡೆಲಿವರಿ ಚಾರ್ಜ್ ನೀಡುವ ಅಗತ್ಯವಿಲ್ಲ ಎಂದು ಹಿಂದೂಸ್ಥಾನ್‌ ಪೆಟ್ರೋಲಿಯಂ ಕಾರ್ಪೊ-ರೇಷನ್‌ ಲಿಮಿಟೆಡ್‌(ಎಚ್‌ಪಿಸಿಎಲ್‌) ಹೇಳಿದೆ.


Provided by

ಹೈದರಾಬಾದ್ ನ ಗ್ರಾಹಕರೊಬ್ಬರು ಈ ಬಗ್ಗೆ ಮಾಹಿತಿ ಹಕ್ಕಿನಡಿಯಲ್ಲಿ ಕೇಳಿರುವ ಪ್ರಶ್ನೆಗೆ ಎಚ್‌ ಪಿಸಿಎಲ್‌ ಈ ಉತ್ತರ ನೀಡಿದ್ದು, ಗ್ರಾಹಕರ ಮನೆಗೆ ಗ್ಯಾಸ್‌ ಸಿಲಿಂಡರ್‌ ತಲುಪಿಸುವುದು ವಿತರಕರ ಜವಾಬ್ದಾರಿ. ಗ್ರಾಹಕರ ಮನೆಯು ಯಾವುದೇ ಮಹಡಿಯಲ್ಲಿದ್ದರೂ ಸರಬರಾಜು ಶುಲ್ಕವನ್ನು ಕೇಳುವಂತಿಲ್ಲ. ಇದು ಎಲ್ಲ ಕಂಪೆನಿಗಳಿಗೂ ಅನ್ವಯ ಎಂದು ಹೇಳಿದೆ.

ಬಿಲ್ ನಲ್ಲಿ ನಮೂದಿಸಿರುವುದಕ್ಕಿಂತ ಹೆಚ್ಚಿನ ಮೊತ್ತವನ್ನು ಯಾರೂ ಕೇಳುವಂತಿಲ್ಲ, ಸಿಲಿಂಡರ್‌ ತಂದು ಕೊಡುವ ವ್ಯಕ್ತಿಯು ಬಿಲ್‌ ಗಿಂತಲೂ ಹೆಚ್ಚಿನ ಹಣ ಕೇಳಿದರೆ, ಗ್ರಾಹಕರು ನಿರಾಕರಿಸಿ ಎಂದು ಹೇಳಿದೆ.

ಇತ್ತೀಚಿನ ಸುದ್ದಿ