ಎನ್ ಸಿಇಆರ್ ಟಿ ಪಠ್ಯಪುಸ್ತಕದಲ್ಲಿ ಇನ್ಮುಂದೆ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಪಠ್ಯ..!

ಎನ್ ಸಿಇಆರ್ ಟಿ ಪಠ್ಯಪುಸ್ತಕದಲ್ಲಿ ಇನ್ನು ಮುಂದೆ ರಾಮಮಂದಿರ ಧ್ವಂಸಗೊಳಿಸಿದ್ದಾಗಲಿ, 2002 ರಲ್ಲಿ ಗುಜರಾತಿನಲ್ಲಿ ನಡೆದ ಹತ್ಯಾಕಾಂಡಕ್ಕೆ ಸಂಬಂಧಿಸಿದ ಉಲ್ಲೇಖಗಳಾಗಲಿ ಇರುವುದಿಲ್ಲ. ಅದಕ್ಕೆ ಬದಲು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಪಠ್ಯ ಇರಲಿದೆ. ಈವರೆಗೆ ಇದ್ದ ಬಾಬರಿ ಮಸೀದಿ ಧ್ವಂಸ ಮತ್ತು ಗುಜರಾತ್ ಹತ್ಯಾಕಾಂಡದ ಪಠ್ಯವನ್ನು ಕಿತ್ತೆಸೆದು ಹೊಸ ರಾಮ ಮಂದಿರ ನಿರ್ಮಾಣದ ಪಠ್ಯವನ್ನು ಸೇರಿಸಲಾಗಿದೆ.
2024 25 ನೇ ಸಾಲಿನ ಪಠ್ಯಕ್ಕಾಗಿ ಈ ಪರಿಷ್ಕರಣೆ ನಡೆಸಲಾಗಿದೆ. ಬಾಬರಿ ಮಸೀದಿಯನ್ನು ಉರುಳಿಸಲಾಗಿದೆ ಎಂಬ ವಾಕ್ಯವನ್ನು ಕಿತ್ತುಹಾಕಿ ಸುಪ್ರೀಂ ಕೋರ್ಟ್ ನ ನಿರ್ದೇಶನದಂತೆ ರಾಮಮಂದಿರವನ್ನು ನಿರ್ಮಿಸಲಾಗಿದೆ ಎಂಬ ವಾಕ್ಯವನ್ನು ಸೇರಿಸಲಾಗಿದೆ. ಹಾಗೆಯೇ ನರ್ಮದಾ ಅಣೆಕಟ್ಟಿಗಾಗಿ ಸಾವಿರಾರು ಬುಡಕಟ್ಟುಗಳನ್ನು ಒಕ್ಕಲಿಬ್ಬಿಸಿ ಅವರನ್ನು ನಿರಾಶ್ರಿತರನ್ನಾಗಿಸಲಾಗಿದೆ ಎಂಬ ಭಾಗವನ್ನು ಕೂಡ ಕಿತ್ತು ಹಾಕಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth