ಲೋಕ ಅಖಾಡ: ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್; ಆ ಪ್ರಣಾಳಿಕೆಯಲ್ಲಿ ಏನಿದೆ..? - Mahanayaka

ಲೋಕ ಅಖಾಡ: ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್; ಆ ಪ್ರಣಾಳಿಕೆಯಲ್ಲಿ ಏನಿದೆ..?

05/04/2024

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಪ್ರಣಾಳಿಕೆಯಲ್ಲಿ ಬಡ ಮಹಿಳೆಯರಿಗೆ ಹಣ ವರ್ಗಾವಣೆ, ಯುವಕರಿಗೆ ಉದ್ಯೋಗ, ಜಾತಿ ಗಣತಿಗೆ ಆದ್ಯತೆ ನೀಡಲಾಗಿದೆ. ಸರ್ಕಾರಿ ಹಾಗೂ ಕೇಂದ್ರ ಸ್ವಾಮ್ಯದ ಉದ್ಯೋಗಗಳಲ್ಲಿ ಗುತ್ತಿಗೆ ರದ್ದುಗೊಳಿಸಿ, ಶಾಶ್ವತ ಉದ್ಯೋಗಗಳನ್ನಾಗಿಸುವ ಭರವಸೆ ನೀಡಲಾಗಿದೆ.

ಭೂ ಸೀಲಿಂಗ್‌ ಕಾಯ್ದೆಗಳ ಅಡಿಯಲ್ಲಿ ಬಡವರಿಗೆ ಸರ್ಕಾರಿ ಭೂಮಿ ನೀಡಲು ಹಾಗೂ ಭೂಮಿ ನೀಡುವುದನ್ನು ಹೆಚ್ಚಿಸಲು ಪ್ರಾಧಿಕಾರವನ್ನು ರಚಿಸುವುದು
ಎಲ್‌ಜಿಬಿಟಿ ಕ್ಯೂಐಎ, ಹಿರಿಯ ನಾಗರಿಕರಿಗೆ, ವೃದ್ಧರಿಗೆ ನೀಡಲಾಗುವ ವೃದ್ಧಾಪ್ಯ ವೇತನವನ್ನು 1000 ರೂ. ಗೆ ಹೆಚ್ಚಳ

ಒಂದರಿಂದ 12ನೇ ತರಗತಿಯವರೆಗೆ ಸಾರ್ವಜನಿಕ ಶಾಲೆಗಳಲ್ಲಿ ಕಡ್ಡಾಯ ಉಚಿತ ಶಿಕ್ಷಣ ನೀಡುವ ಆರ್‌ಟಿಐ ಕಾಯ್ದೆಗೆ ತಿದ್ದುಪಡಿ
21 ವರ್ಷದೊಳಗಿನ ಪ್ರತಿಭಾವಂತ ಹಾಗೂ ಉದಯೋನ್ಮುಖ ಕ್ರೀಡಾಪಡುಗಳಿಗೆ ಪ್ರತಿ ತಿಂಗಳು 10 ಸಾವಿರ ರೂ. ಕ್ರೀಡಾ ವಿದ್ಯಾರ್ಥಿ ವೇತನ
ಬಡ ಕುಟುಂಬದ ಮಹಿಳೆಯರಿಗೆ ಯಾವುದೇ ನಿಯಮವಿಲ್ಲದೆ ಮಹಾಲಕ್ಷ್ಮಿ ಯೋಜನೆಯಡಿ ವಾರ್ಷಿಕ 1 ಲಕ್ಷ ರೂ. ವಿತರಣೆ
ಸ್ವಾಮಿನಾಥನ್‌ ಆಯೋಗದ ಶಿಫಾರಸ್ಸಿನೊಂದಿಗೆ ಪ್ರತಿ ವರ್ಷ ಸರ್ಕಾರದಿಂದ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಗ್ಯಾರಂಟಿ ಖಾತರಿ ನೀಡಿಕೆ
ಮಾಧ್ಯಮಗಳಿಗೆ ವಿಧಿಸಲಾಗಿರುವ ಹಲವು ನಿರ್ಬಂಧಗಳನ್ನು ಸ್ಥಗಿತಗೊಳಿಸುವುದರ ಜೊತೆ ಮುಕ್ತ ಸ್ವಾತಂತ್ರ ನೀಡುವುದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಒಳಗೊಂಡಿವೆ.


Provided by

ಜಾತಿಗಳು, ಉಪಜಾತಿಗಳು ಹಾಗೂ ಅವುಗಳ ಆರ್ಥಿಕ-ಸಾಮಾಜಿಕ ಸ್ಥಿತಿಗತಿಗಳನ್ನು ಎಣಿಕೆ ಮಾಡುವುದರ ಮೂಲಕ ದೇಶಾದ್ಯಂತ ಜಾತಿ ಗಣತಿ ನಡೆಸುವುದು. ಇವುಗಳ ಅಂಕಿಅಂಶಗಳ ಆಧಾರದ ಮೇಲೆ ಕಾರ್ಯಸೂಚಿಗಳನ್ನು ರೂಪಿಸುವುದು.
ಎಸ್‌ಸಿ,ಎಸ್‌ಟಿ ಹಾಗೂ ಒಬಿಸಿ ಸಮುದಾಯಗಳಿಗಿರುವ ಶೇ.50 ಮೀಸಲಾತಿಯನ್ನು ಸಾಂವಿಧಾನಿಕ ತಿದ್ದುಪಡಿಯ ಮೂಲಕ ಹೆಚ್ಚಿಸುವುದು.

ಯಾವುದೇ ತಾರತಮ್ಯವಿಲ್ಲದೆ ಎಲ್ಲ ಜಾತಿ ಸಮುದಾಯಗಳ ಆರ್ಥಿಕ ದುರ್ಬಲ ವರ್ಗಗಳಿಗೆ ಉದ್ಯೋಗ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಶೇ.10 ರಷ್ಟು ಮೀಸಲಾತಿ ಒದಗಿಸುವುದು.
ಒಂದು ವರ್ಷದೊಳಗೆ ಎಸ್‌ಸಿ,ಎಸ್‌ಟಿ ಹಾಗೂ ಒಬಿಸಿ ಸಮುದಾಯಗಳ ಮೀಸಲು ಉದ್ಯೋಗಗಳ ಎಲ್ಲ ಬ್ಯಾಕ್‌ಲಾಗ್‌ ಉದ್ಯೋಗಗಳನ್ನು ಭರ್ತಿ ಮಾಡುವುದು.
ಎಸ್‌ಸಿ,ಎಸ್‌ಟಿ ಸಮುದಾಯದವರಿಗೆ ಮನೆ ನಿರ್ಮಾಣ, ಉದ್ಯಮ ಪ್ರಾರಂಭ ಹಾಗೂ ಆಸ್ತಿ ಖರೀದಿಸಲು ನೀಡುವ ಸಾಂಸ್ಥಿಕ ಸಾಲವನ್ನು ಹೆಚ್ಚಿಸುವುದು ಕಾಂಗ್ರೆಸ್‌ ಪ್ರಣಾಳಿಕೆಯ ಪಟ್ಟಿಯಲ್ಲಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ