ಈ ಪಟ್ಟಿಯಲ್ಲಿ ನಂಬರ್ 1 ಸ್ಥಾನ ಪಡೆದುಕೊಂಡ ಚಿಕನ್ ಬಿರಿಯಾನಿ - Mahanayaka
2:16 PM Thursday 12 - September 2024

ಈ ಪಟ್ಟಿಯಲ್ಲಿ ನಂಬರ್ 1 ಸ್ಥಾನ ಪಡೆದುಕೊಂಡ ಚಿಕನ್ ಬಿರಿಯಾನಿ

10/11/2020

ನವದೆಹಲಿ:  ಆಹಾರ ಸರಬರಾಜು ಕಂಪೆನಿಯಾಗಿರುವ ಸ್ವಿಗ್ಗಿಯಲ್ಲಿ ಚಿಕನ್ ಬಿರಿಯಾನಿ ಅತ್ಯಂತಹ ಹೆಚ್ಚು ಆರ್ಡರ್ ಆದ ಆಹಾರವಾಗಿದೆ ಎಂದು ಸ್ವಿಗ್ಗಿ ತಿಳಿಸಿದ್ದು, ಕೊವಿಡ್ 19 ಸಾಂಕ್ರಾಮಿಕ ರೋಗದ ಸಮಯ ಹಾಗೂ ಕ್ರಿಕೆಟ್ ಸೀಸನ್ ಗಳಲ್ಲಿ ಅತೀ ಹೆಚ್ಚು ಚಿಕನ್ ಬಿರಿಯಾನಿ ಆರ್ಡರ್ ಆಗಿದೆ ಎಂದು ಸಂಸ್ಥೆ ಹೇಳಿದೆ.

ಮುಂಬೈ, ದೆಹಲಿ, ಹೈದರಾಬಾದ್, ಚೆನ್ನೈ, ಅಹಮದಾಬಾದ್ ಮತ್ತು ಪುಣೆಗಳಲ್ಲಿ ವಾಸಿಸುವ ಜನರು ಪಿಜ್ಜಾವನ್ನು ಹೆಚ್ಚು ಇಷ್ಟಪಟ್ಟಿದ್ದಾರೆ. ಐಪಿಎಲ್ ಮ್ಯಾಚ್ ನ ಸಂದರ್ಭದಲ್ಲಿ  ಬೆಂಗಳೂರು, ಲಕ್ನೋ, ಕೋಲ್ಕತ್ತಾದ ಜನರು ಅತೀ ಹೆಚ್ಚು ಚಿಕನ್ ಕಬಾಬ್ ಗಳನ್ನು ಆರ್ಡರ್ ಮಾಡಿದ್ದಾರಂತೆ.

ಈ ಎಲ್ಲ ಆಹಾರಗಳ ಪೈಕಿ ಚಿಕನ್ ಬಿರಿಯಾನಿ ನಂಬರ್ 1 ಸ್ಥಾನದಲ್ಲಿದೆ ಎಂದು ಮಂಗಳವಾರ ಸ್ವಿಗ್ಗಿ ತನ್ನ ಆಹಾರ ವಿತರಣಾ ಪಟ್ಟಿಯನ್ನು ಪ್ರಕಟ ಮಾಡಿದೆ.  ಆಹಾರಗಳನ್ನು ಆರ್ಡರ್ ಮಾಡುವ ಸಂಖ್ಯೆಯಲ್ಲಿ ಬೆಳವಣಿಗೆ ಕಂಡಿದ್ದು, ಶೇ.30ರಷ್ಟು ಏರಿಕೆಯಾಗಿದೆ.  ಐಪಿಎಲ್ ಪಂದ್ಯಗಳ ಸಮಯಗಳಲ್ಲಿ ದೇಶದಲ್ಲಿಯೇ ಬೆಂಗಳೂರು, ಮುಂಬೈ, ಚೆನ್ನೈ ನಗರಗಳಲ್ಲಿ ಅತೀ ಹೆಚ್ಚು ಆಹಾರದ ಆರ್ಡರ್ ಗಳು ಬಂದಿವೆ ಎಂದು ಸ್ವಿಗ್ಗಿ ಹೇಳಿದೆ.


Provided by

ಐಪಿಎಲ್ ಸಮಯದಲ್ಲಿ  ಅತೀ ಹೆಚ್ಚು ಆರ್ಡರ್ ಮಾಡಿದ ಆಹಾರಗಳ ಪೈಕಿ ಚಿಕನ್ ಬಿರಿಯಾನಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದರೆ, ಉಳಿದಂತೆ ಕ್ರಮವಾಗಿ ಬಟರ್ ನಾನ್, ಮಸಾಲ ದೋಸೆ, ಪನೀರ್ ಬಟರ್ ಮಸಾಲ ಚಿಕನ್ ಫ್ರೈಡ್ ರೈಸ್, ತಂದೂರಿ ರೊಟ್ಟಿ, ವೆಜ್ ಫ್ರೈಡ್ ರೈಸ್, ಮಟನ್ ಬಿರಿಯಾನಿ, ಬೆಳ್ಳುಳ್ಳಿ ಬ್ರೆಡ್ ಸ್ಟಿಕ್ಸ್ ಮತ್ತು ತಂದೂರಿ ಚಿಕನ್ ಸ್ಥಾನ ಪಡೆದುಕೊಂಡಿದೆ.

ಇತ್ತೀಚಿನ ಸುದ್ದಿ