ಸೋನಿಯಾ ಗಾಂಧಿಗೆ ಕಾಂಗ್ರೆಸ್ ಅವಧಿಯಲ್ಲಿಯೇ  ಭಾರತ ರತ್ನ ನೀಡಬಹುದಿತ್ತಲ್ಲವೇ?- ನಿತೀಶ್ ಕುಮಾರ್ - Mahanayaka

ಸೋನಿಯಾ ಗಾಂಧಿಗೆ ಕಾಂಗ್ರೆಸ್ ಅವಧಿಯಲ್ಲಿಯೇ  ಭಾರತ ರತ್ನ ನೀಡಬಹುದಿತ್ತಲ್ಲವೇ?- ನಿತೀಶ್ ಕುಮಾರ್

07/01/2021

ಪಾಟ್ನಾ: ಸೋನಿಯಾ ಗಾಂಧಿಗೆ ಭಾರತ ರತ್ನ ನೀಡಬೇಕು ಎಂದು ಉತ್ತರಕಾಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರ ಹೇಳಿಕೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ಪ್ರತಿಕ್ರಿಯಿಸಿದ್ದು,  ಈ ಕೆಲಸವನ್ನು ತಮ್ಮ ಅಧಿಕಾರ ಅವಧಿಯಲ್ಲಿಯೇ ಅವರು ಪೂರೈಸಿಕೊಳ್ಳಬಹುದಿತ್ತಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಪ್ರಶಸ್ತಿಗಾಗಿ ಬೇಡಿಕೆ ಇಡುವ ಹಕ್ಕು ಎಲ್ಲರಿಗೂ ಇದೆ ಆದರೆ ಗೌರವ ಸ್ವೀಕರಿಸುವ ಅರ್ಹತೆ ಆ ವ್ಯಕ್ತಿಯಲ್ಲಿದೆಯೇ ಎಂದು ತಿಳಿದುಕೊಳ್ಳುವುದು ಉತ್ತಮ ಎಂದು ಅವರು ಹೇಳಿದ್ದಾರೆ.

ಸೋನಿಯಾ ಗಾಂಧಿಗೆ  ಭಾರತ ರತ್ನ ನೀಡುವ ವಿಷಯವನ್ನು ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಯಾಕೆ ಎತ್ತಲಿಲ್ಲ ಮತ್ತು ಆಗ ಈ ಕೆಲಸವನ್ನು ಏಕೆ ಮಾಡಲಿಲ್ಲ. ಈಗ ಇದರ ಹಿಂದಿರುವ ಉದ್ದೇಶವೇನು? ಎಂದು ನಿತೀಶ್ ಹೇಳಿದ್ದಾರೆ.

ಬಿಎಸ್‍ಪಿ ವರಿಷ್ಠೆ ಮಾಯಾವತಿ ಹಾಗೂ ಸೋನಿಯಾ ಗಾಂಧಿ ಅವರಿಗೆ ಭಾರತರತ್ನ ನೀಡಬೇಕು ಎಂದು  ಹರೀಶ್ ರಾವತ್  ಸಲಹೆ ನೀಡಿದ್ದರು. ಆದರೆ , ಈ ಕೆಲಸವನ್ನು ಕಾಂಗ್ರೆಸ್ ತನ್ನ ಅಧಿಕಾರ ಅವಧಿಯಲ್ಲಿ ಮಾಡಬಹುದಿತ್ತಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.

ಇತ್ತೀಚಿನ ಸುದ್ದಿ