ಅಪ್ರಾಪ್ತ ಬಾಲಕಿಯ ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಮೂವರ ಬಂಧನ - Mahanayaka
3:09 AM Thursday 30 - November 2023

ಅಪ್ರಾಪ್ತ ಬಾಲಕಿಯ ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಮೂವರ ಬಂಧನ

08/11/2020

ದಾವಣಗೆರೆ:  ಅಪ್ರಾಪ್ತ ಯುವತಿಯನ್ನು ಹೆದರಿಸಿ ಮೂರು ಜನ ಯುವಕರು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣದ ಆರೋಪಿಯಾದ ಹಾಲೇಶ್ ಎಂಬಾತನನ್ನು ಬಂಧಿಸಿ ನ್ಯಾಯಾಲಯ ಬಂಧನಕ್ಕೆ ಒಪ್ಪಿಸಲಾಗಿದೆ.

ವಿಶೇಷವಾಗಿ ಈ ಪ್ರಕರಣದಲ್ಲಿ ಮೊದಲ ಆರೋಪಿಗೆ ಸಹಕರಿಸಿದ ಸ್ನೇಹಿತರಾದ ಚನ್ನಗಿರಿ ತಾಲೂಕಿನ ಹರೋಸಾಗರ ಗ್ರಾಮದ ಹಾಲೇಶ್, ಹೊನ್ನಾಳಿಯ ಕುಂದೂರು ಗ್ರಾಮದ ರುದ್ರೇಶ್ ಎಂಬುವವನನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿಯಾದ ಹನುಮಂತಪ್ಪ ಎಂಬಾತ ತಲೆಮರೆಸಿಕೊಂಡಿರುತ್ತಾನೆ. ಆರೋಪಿಗಳ ವಿರುದ್ಧ ಹೊನ್ನಾಳಿ  ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆ ಪ್ರಕರಣ ದಾಖಲಾಗಿದ್ದು ತಲೆಮರೆಸಿ ಕೊಂಡಿರುವ ಹನುಮಂತಪ್ಪ ಎಂಬುವವನ ಪತ್ತೆಗಾಗಿ ಪೋಲಿಸರು ಕಾರ್ಯಚರಣೆಯಲ್ಲಿದ್ದಾರೆ ಎಂದು ಹೊನ್ನಾಳಿ ವೃತ್ತ ನಿರೀಕ್ಷಕರಾದ  ದೇವರಾಜ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ದಿನಾಂಕ 4 ರಂದು ಬುಧವಾರ ಹುಡುಗಿ ಕಾಣೆಯಾಗಿರುವ ಬಗ್ಗೆ ಹೊನ್ನಾಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತೆ. ತನಿಖೆ ಕೈಗೊಂಡು ಇವರುಗಳನ್ನು ವಿಚಾರಣೆ ನಡೆಸುತ್ತೇವೆ. ಆದರೆ ಆರೋಪಿಗಳು ನಿಜವನ್ನು ಒಪ್ಪಿಕೊಂಡಿರುವುದಿಲ್ಲಾ. ಕಿಡ್ನ್ಯಾಪರ್ಸಗಳನ್ನು ಬಂಧಿಸಿದಾಗ ನೊಂದ ಸಂತ್ರಸ್ತೆ ನಮ್ಮ ಮುಂದೆ ನಡೆದ ಸತ್ಯ ಸಂಗತಿಗಳನ್ನು  ಹೇಳಿದಾಗ ,ಹಾಲೇಶ್ , ರುದ್ರೇಶ್ .ಹಾಲೇಶ್, ಹನುಮಂತಪ್ಪ ಇವರುಗಳ ಮೇಲೆ ಪೋಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿರುತ್ತೇವೆ ಮತ್ತೊಬ್ಬ ಆರೋಪಿ ಹನುಮಂತಪ್ಪ ತಲೆಮರೆಸಿಕೊಂಡಿದ್ದು ಸದ್ಯದರಲ್ಲೆ ಪತ್ತೆ ಹಚ್ಚಿ ಬಂಧಿಸಲಾಗುವುದು.

-ಟಿ.ವಿ ದೇವರಾಜ್, ಹೊನ್ನಾಳಿ ಪೊಲೀಸ್ ವೃತ್ತ ನಿರೀಕ್ಷಕರು.

 

ವರದಿ: ಕೋಗಲೂರು ಕುಮಾರ್

ಇತ್ತೀಚಿನ ಸುದ್ದಿ