ಹೆಣ್ಣು ಮಕ್ಕಳಿಗೆ ಖಾಸಗಿ ಭಾಗ ತೋರಿಸುತ್ತಿದ್ದ ಸಬ್ ಇನ್ಸ್ ಪೆಕ್ಟರ್! | ಈ ವಿಕೃತ ಪೊಲೀಸರಿಗೆ ಸಿಕ್ಕಿ ಬಿದ್ದದ್ದು ಹೇಗೆ ಗೊತ್ತಾ? - Mahanayaka

ಹೆಣ್ಣು ಮಕ್ಕಳಿಗೆ ಖಾಸಗಿ ಭಾಗ ತೋರಿಸುತ್ತಿದ್ದ ಸಬ್ ಇನ್ಸ್ ಪೆಕ್ಟರ್! | ಈ ವಿಕೃತ ಪೊಲೀಸರಿಗೆ ಸಿಕ್ಕಿ ಬಿದ್ದದ್ದು ಹೇಗೆ ಗೊತ್ತಾ?

26/10/2020

ಸಸ್ಪೆನ್ಸ್ ಸಿನಿಮಾವನ್ನೇ ಹೋಲುವ ರಿಯಲ್ ಸ್ಟೋರಿ:

ನವದೆಹಲಿ: ದೆಹಲಿಯ ದ್ವಾರಕಾದಲ್ಲಿ ಐದು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸಬ್ ಇನ್ಸ್ ಪೆಕ್ಟರ್ ವೋರ್ವನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಆತನನ್ನು ಹಾಜರುಪಡಿಸಿದ್ದಾರೆ.

ಪುನೀತ್ ಗ್ರೆವಾಲ್ ಬಂಧಿತ ಆರೋಪಿಯಾಗಿದ್ದಾನೆ. ಈತ ಟ್ರಾಫಿಕ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಅಕ್ಟೋಬರ್ 17ರಂದು ಅಪ್ರಾಪ್ತೆಯೊಬ್ಬಳು ಈತನ ದುಷ್ಕೃತ್ಯದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.

ಮಹಿಳೆಯು ಸೈಕ್ಲಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಬೂದುಬಣ್ಣದ ಕಾರಿನಲ್ಲಿ ಬಂದಿದ್ದ ಪುನೀತ್ ಗ್ರೆವಾಲ್ ಸೈಕಲ್ ನ್ನು ಹಿಂಬಾಳಿಸಿದ್ದಾನೆ. ಈ ವೇಳೆ ಆತ ಮುಂದೆ ಹೋಗಲು ದಾರಿ ಕೇಳುತ್ತಿದ್ದಾನೆ ಎಂದು ಭಾವಿಸಿ, ರಸ್ತೆ ಬದಿಗೆ ಅಪ್ರಾಪ್ತೆ ವಾಹನವನ್ನು ನಿಲ್ಲಿಸಿದ್ದಾರೆ. ಈ  ವೇಳೆ ಆತ, ಈ ರಸ್ತೆ ಎಲ್ಲಿ ಹೋಗುತ್ತಿದೆ ಎಂದು ಕೇಳಿದ್ದಾನೆ. ಈ ಸಂದರ್ಭದಲ್ಲಿ ಅಪ್ರಾಪ್ತೆಯು ಉತ್ತರಿಸಲು ಮುಂದಾಗುತ್ತಿದ್ದಂತೆಯೇ ತನ್ನ ಪ್ಯಾಂಟ್ ಬಿಚ್ಚಿ, ಖಾಸಗಿ ಅಂಗಗಳನ್ನು ಮುಟ್ಟಲು ಪ್ರಾರಂಭಿಸಿದ್ದಾನೆ. ಈ ಘಟನೆಯ ಬಳಿಕ ಬಾಲಕಿಯು ಈ ವಿಚಾರವನ್ನು ತನ್ನ ಹೆತ್ತವರಿಗೆ ತಿಳಿಸಿದ್ದಾಳೆ. ಬಳಿಕ 1091 ಸಹಾಯವಾಣಿಗೆ ಕರೆ ಮಾಡಿ, ದೂರು ನೀಡಿದ್ದಾಳೆ.

ದೂರಿನನ್ವಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.  ಪುನೀತ್ ಗ್ರೆವಾಲ್ ಬಳಸುತ್ತಿದ್ದ ಕಾರಿನಲ್ಲಿ ಯಾವುದೇ ನಂಬರ್ ಪ್ಲೇಟ್ ಗಳಿರಲಿಲ್ಲ ಎನ್ನುವುದು ಮೊದಲು ತಿಳಿದು ಬಂದರೆ, ಇನ್ನೊಂದು ಮುಖ್ಯ ವಿಚಾರ ತನಿಖೆಯ ವೇಳೆ ತಿಳಿದು ಬಂತು. ಒಂದೇ ರಸ್ತೆಯಲ್ಲಿ ಇಂತಹ 4 ಘಟನೆಗಳು ನಡೆದಿದ್ದು, ಈ ಘಟನೆಯೂ ಸೇರಿದರೆ 5ನೇ ಪ್ರಕರಣ ಇದಾಗಿದೆ.  ಹೀಗಾಗಿ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದರು. ಸಿಸಿ ಕ್ಯಾಮರಗಳ ದೃಶ್ಯಗಳನ್ನು ಪರಿಶೀಲಿಸಿದರು. ಆದರೆ ಆರೋಪಿ ವೃತ್ತಿಯಲ್ಲಿ ಪೊಲೀಸ್ ಆಗಿದ್ದರಿಂದಾಗಿ ಈತ ಬಹಳಷ್ಟು ಬುದ್ದಿವಂತಿಕೆ ಬಳಸಿದ್ದ. ತನ್ನ ಕಾರಿನ ನಂಬರ್ ಪ್ಲೇಟ್ ಕಾಣಿಸದಂತೆ ಬಟ್ಟೆಯಿಂದ ಮುಚ್ಚಿದ್ದ.

ಹೀಗಾಗಿ ಪೊಲೀಸರು ಕಾರನ್ನು ಸ್ಕ್ಯಾನ್ ಮಾಡಲು ಆರಂಭಿಸಿದರು. ಕಾರು ಜನಕಪುರಿ ಕಡೆಗೆ ಹೋಗುತ್ತಿರುವುದು ಪತ್ತೆಯಾಯಿತು.  ಪೊಲೀಸರು ಇತರ ಕ್ಯಾಮರಗಳನ್ನು ಪರಿಶೀಲಿಸಿ ಆರೋಪಿಯ ವಿಳಾಸವನ್ನು ಕೊನೆಗೂ ಪತ್ತೆ ಹಚ್ಚಿದ್ದಾರೆ.  ಆತನ ಮನೆಗೆ ಬಂದಾಗ ಕಾರನ್ನು ಪಾರ್ಕ್ ಮಾಡಿರುವುದು ಪತ್ತೆಯಾಗಿದೆ. ಆರೋಪಿ ಒಬ್ಬ ಸಬ್ಸ್ ಇನ್ಸ್ ಪೆಕ್ಟರ್ ಎನ್ನುವುದು ತಿಳಿಯುತ್ತಿದ್ದಂತೆಯೇ ಪೊಲೀಸರು ಶಾಕ್ ಆಗಿದ್ದಾರೆ.

ಆರೋಪಿ ಪುನೀತ್ ಗ್ರೆವಾಲ್ ಪತ್ನಿ ಶಿಕ್ಷಕಿಯಾಗಿದ್ದು, ಆಕೆಯ ಹೆಸರಿನಲ್ಲಿ ಈ ಕಾರನ್ನು ನೋಂದಾಯಿಸಲಾಗಿತ್ತು. ಇನ್ನೊಂದು ವಿಚಿತ್ರ ಏನೆಂದರೆ, ಈ ಪುನೀತ್ ಗ್ರೆವಾಲ್ ಗೂ ಒಬ್ಬಳು ಮಗಳಿದ್ದಾಳೆ. ಆದರೆ ಈತ ಬೀದಿಯಲ್ಲಿ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳಿಗೆ ತನ್ನ ಖಾಸಗಿ ಭಾಗ ತೋರಿಸಿ ವಿಕೃತಿ ಮೆರೆದಿದ್ದಾನೆ. ಸದ್ಯ ಆರೋಪಿಯ ವಿರುದ್ಧ ದೆಹಲಿ ಪೊಲೀಸರು ಕಿರುಕುಳ, ಪೊಕ್ಟೋ ಮೊದಲಾದ ಕಾಯ್ದೆಗಳಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಫಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಮಹಾನಾಯಕ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ

https://t.me/joinchat/Q8oMxBZkakVUy7-VpEsIXQ

ನಿಮ್ಮ ಸುದ್ದಿಗಳನ್ನು ಕಳುಹಿಸಿ: mahanayakain@gmail.com

ಇತ್ತೀಚಿನ ಸುದ್ದಿ