ತನ್ನ ಪ್ರೇಯಸಿಯ ಸಮಾಧಿ ಬಳಿಯಲ್ಲೇ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ - Mahanayaka

ತನ್ನ ಪ್ರೇಯಸಿಯ ಸಮಾಧಿ ಬಳಿಯಲ್ಲೇ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ

26/10/2020

ಹೈದರಾಬಾದ್: ಪ್ರೇಯಸಿ ಸಾವನ್ನಪ್ಪಿದ ನೋವನ್ನು ಸಹಿಸಲಾಗದೇ, ಆಕೆಯ ಸಮಾಧಿ ಬಳಿಯಲ್ಲಿಯೇ ಪ್ರಿಯಕರ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾದೇವಾಪುರ್ ಮಂಡಲದ ಕುದುರುಪಲ್ಲಿ ಎಂಬಲ್ಲಿ ನಡೆದಿದೆ.


Provided by

ಮಹೇಶ್ ಎಂಬ ಯುವಕ ಅದೇ ಗ್ರಾಮದ ಯುವತಿಯೊಬ್ಬಳನ್ನು ತನ್ನ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸಿದ್ದ. ಆದರೆ ದುರದೃಷ್ಟವಶಾತ್ ಆ ಹುಡುಗಿ ಅನಾರೋಗ್ಯದಿಂದ ಮೃತಪಟ್ಟಿದ್ದಳು. ಇದರಿಂದಾಗಿ ತೀವ್ರವಾಗಿ ಮಹೇಶ್ ನೊಂದಿದ್ದ.

ತಾನು ಪ್ರೀತಿಸಿದ ಹುಡುಗಿ ಈ ರೀತಿಯಾಗಿ ಮೃತಪಟ್ಟಿರುವುದನ್ನು ಸಹಿಸಲಾಗದೇ ಚಡಪಡಿಸುತ್ತಿದ್ದ ಮಹೇಶ್ ಆಕೆಯ ಸಮಾಧಿ ಬಳಿಯಲ್ಲಿಯೇ ತಾನು ಕೂಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.


Provided by

ಇತ್ತೀಚಿನ ಸುದ್ದಿ