ಇಲಿಗೆ ವಿಷ ಇಡುವ ಮೊದಲು ಈ ಸುದ್ದಿ ಓದಿ | ನಿಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಳ್ಳಬೇಡಿ
ಉಡುಪಿ: ಇಲಿಗಳನ್ನು ಕೊಲ್ಲಲು ವಿಷ ಇಡುವವರು ಈ ಸುದ್ದಿಯನ್ನು ಓದಲೇ ಬೇಕಿದೆ. ಮಹಿಳೆಯೊಬ್ಬರು ಇಲಿಯನ್ನು ಕೊಲ್ಲಲೆಂದು ವಿಷ ಬೆರೆಸಿಟ್ಟ ಪಪ್ಪಾಯಿ ತಿಂದು ಸಾವನ್ನಪ್ಪಿದ ಘಟನೆ ಉಡುಪಿ ತಾಲೂಕಿನ ಕುದಿ ಗ್ರಾಮದ ದೇವರಗುಂಡ ಎಂಬಲ್ಲಿ ನಡೆದಿದೆ.
ತೀವ್ರ ಇಲಿ ಕಾಟದಿಂದ ತಪ್ಪಿಸಿಕೊಳ್ಳಲು ಪಪ್ಪಾಯಿಯಲ್ಲಿ ವಿಷ ಬೆರೆಸಿ ಇಡಲಾಗಿತ್ತು. ಆದರೆ ಪಪ್ಪಾಯಿಗೆ ವಿಷ ಬೆರೆಸಲಾಗಿದೆ ಎಂದು ಅರಿಯದ ಶ್ರೀಮತಿ(43) ಎಂಬವರು ಪಪ್ಪಾಯಿ ಹಣ್ಣನ್ನು ತಿಂದಿದ್ದಾರೆ. ಮರು ದಿನ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು.
ಶ್ರೀಮತಿ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ ಅ.19ರಂದು ಮಹಿಳೆ ವಿಷ ಬೆರೆಸಿದ ಪಪ್ಪಾಯಿ ತಿಂದಿದ್ದಾರೆ. ಅಕ್ಟೋಬರ್ 24ರಂದು ಅವರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಮೃತರ ಪುತ್ರಿ ನೀಡಿರುವ ದೂರಿನಂತೆ ಹಿರಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಹಾನಾಯಕ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ
https://t.me/joinchat/Q8oMxBZkakVUy7-VpEsIXQ
ನಿಮ್ಮ ಸುದ್ದಿಗಳನ್ನು ಕಳುಹಿಸಿ: mahanayakain@gmail.com