PUB-G ಹೋದರೇನು FAU-G ಬಂತು ನೋಡಿ | PUB-Gಯಂತೆ ಬರಲಿದೆ ಹೊಸ ಗೇಮಿಂಗ್ ಆ್ಯಪ್ - Mahanayaka

PUB-G ಹೋದರೇನು FAU-G ಬಂತು ನೋಡಿ | PUB-Gಯಂತೆ ಬರಲಿದೆ ಹೊಸ ಗೇಮಿಂಗ್ ಆ್ಯಪ್

26/10/2020

ಕೇಂದ್ರ ಸರ್ಕಾರವು PUB-Gಯನ್ನು ನಿಷೇಧಿಸಿದ ಬಳಿಕ ಇದೀಗ ಭಾರತದಲ್ಲಿಯೇ ಇಂತಹದ್ದೊಂದು ಮೊಬೈಲ್ ಗೇಮ್ ಆಪ್ ಬರಲು ಸಿದ್ಧವಾಗಿದೆ. ಈ ಗೇಮ್ ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮ ನಿರ್ಭರ ಭಾರತ್ ಅಭಿಯಾನವನ್ನು ಬೆಂಬಲಿಸಿ ನಟ ಅಕ್ಷಯ್ ಕುಮಾರ್ ಅವರು ಘೋಷಿಸಿದ ಯೋಜನೆಯಾಗಿದೆ.

ದಸರಾ ಸಂದರ್ಭದಲ್ಲಿ ನಟ ಅಕ್ಷಯ್ ಕುಮಾರ್  PUB-Gಗೆ ಪರ್ಯಾಯವಾಗಿ FAU-Gಯ ಟೀಸರ್ ಬಿಡುಗಡೆ ಮಾಡಿದ್ದಾರೆ. ದಸರ ವಿಶೇಷವಾಗಿ ಈ ಟೀಸರ್ ಪರಿಚಯಿಸಿದ್ದೇವೆ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.

FAU-G  ಮೂಲಕ ನಟ ಅಕ್ಷಯ್ ಕುಮಾರ್ ಮೊದಲ ಗೇಮಿಂಗ್ ಉದ್ಯಮ ಆರಂಭಿಸಿದ್ದಾರೆ. ದೇಶದ ಭದ್ರತಾ ಪಡೆಗಳು ಎದುರಿಸುವ ನೈಜ ಸನ್ನಿವೇಶಗಳನ್ನು ಆಧರಿಸಿ ಈ ಆಪ್ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಈ ಆಪ್ ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿರುತ್ತದೆ ಎಂದು ಹೇಳಿದ್ದಾರೆ.

https://youtu.be/6xFokyqLRRk

ಇತ್ತೀಚಿನ ಸುದ್ದಿ