ಮಗಳ ಪರವಾಗಿ ಚುನಾವಣಾ ಪ್ರಚಾರ ಮಾಡಿದ ವಿಧಾನ ಪರಿಷತ್ ಸದಸ್ಯನ ಅಮಾನತು - Mahanayaka

ಮಗಳ ಪರವಾಗಿ ಚುನಾವಣಾ ಪ್ರಚಾರ ಮಾಡಿದ ವಿಧಾನ ಪರಿಷತ್ ಸದಸ್ಯನ ಅಮಾನತು

06/11/2020

ಬಿಹಾರ: ತನ್ನ ಮಹಳ ಪರವಾಗಿ ಪ್ರಚಾರ ಮಾಡಿದ ಕಾರಣಕ್ಕಾಗಿ ಜೆಡಿಯು ಪಕ್ಷದ ವಿಧಾನ ಪರಿಷತ್ ಸದಸ್ಯ ದಿನೇಶ್ ಕುಮಾರ್ ಸಿಂಗ್ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.

ಮುಝಫ್ಫರ್ ಪುರ ಜಿಲ್ಲೆಯ ಗಾಯ್‌ ಘಾಟ್ ಕ್ಷೇತ್ರದಿಂದ ಲೋಕಜನಶಕ್ತಿ ಪಕ್ಷದ ಅಭ್ಯರ್ಥಿಯಾಗಿ ದಿನೇಶ್ ಕುಮಾರ್ ಸಿಂಗ್ ಅವರ ಪುತ್ರಿ ಸ್ಪರ್ಧೆ ಮಾಡಿದ್ದರು.  ಹೀಗಾಗಿ ಮಗಳ ಪರವಾಗಿ  ಅವರು ಮತಯಾಚನೆ ಮಾಡಿದ್ದರು. ಆದರೆ ದಿನೇಶ್ ಕುಮಾರ್ ಸಿಂಗ್ ಅವರಿಗೆ ಪುತ್ರಿಯಾಗಿರಬಹುದು ಆದರೆ, ಜೆಡಿಯು ಪಕ್ಷಕ್ಕೆ ಅವರು ಪ್ರತಿಸ್ಪರ್ಧಿಯಾಗಿದ್ದರು. ಹೀಗಾಗಿ ಇದು ಪಕ್ಷದ್ರೋಹ ಎಂದು ಅವರನ್ನು ಅಮಾನತು ಮಾಡಲಾಗಿದೆ.

ಇನ್ನೂ ದಿನೇಶ್ ಕುಮಾರ್ ಅವರ ನಡೆಯ ಬಗ್ಗೆ ಉತ್ತರ ನೀಡುವಂತೆ ಅವರಿಗೆ ಶೋಕಾಸ್ ನೋಟಿಸ್ ನೀಡುವಂತೆ ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಆರ್ಯ ಸೂಚಿಸಿದ್ದಾರೆ.  ಇನ್ನೂ ದಿನೇಶ್ ಕುಮಾರ್ ಅವರು ಕಾರ್ಯಕರ್ತರನ್ನೂ ತಮ್ಮ ಪುತ್ರಿಯ ಪರ ಪ್ರಚಾರ ಮಾಡುವಂತೆ ಒತ್ತಾಯ ಮಾಡಿದ್ದಾರೆ ಎಂಬ ಆರೋಪವೂ ಅವರ ಮೇಲೆ ಕೇಳಿ ಬಂದಿದೆ.


Provided by

ಇತ್ತೀಚಿನ ಸುದ್ದಿ