ಅಪರಾಧಗಳ ತಡೆ ಬಗ್ಗೆ ಜಾಗೃತಿ ಮೂಡಿಸಿದ ಸಂತೇಬೆನ್ನೂರು ಠಾಣಾ ಪೊಲೀಸರು | ಸಾರ್ವಜನಿಕರಿಗೆ ಅಗತ್ಯ ಮಾಹಿತಿ ಇಲ್ಲಿದೆ - Mahanayaka

ಅಪರಾಧಗಳ ತಡೆ ಬಗ್ಗೆ ಜಾಗೃತಿ ಮೂಡಿಸಿದ ಸಂತೇಬೆನ್ನೂರು ಠಾಣಾ ಪೊಲೀಸರು | ಸಾರ್ವಜನಿಕರಿಗೆ ಅಗತ್ಯ ಮಾಹಿತಿ ಇಲ್ಲಿದೆ

13/12/2020

ಚನ್ನಗಿರಿ: ಅಪರಾಧಗಳು  ನಡೆಯುವ ಬಗ್ಗೆ ತಮಗೆ ಮಾಹಿತಿಗಳಿದ್ದರೆ ತಕ್ಷಣ ಪೊಲೀಸ್ ಇಲಾಖೆಯ ಗಮನಕ್ಕೆ ತಂದರೆ ಅಪರಾಧವನ್ನು ತಡೆಯಲು ಸಹಕಾರವಾಗುತ್ತದೆ, ಮಾಹಿತಿ ನೀಡಿದವರನ್ನು ಇಲಾಖೆಯು ಬಹಿರಂಗ ಪಡಿಸುವುದಿಲ್ಲಾ ಎಂದು ಚನ್ನಗಿರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷರಾದ ಪ್ರಶಾಂತ್ ಜಿ ಮುನ್ನೂಳಿ ಹೇಳಿದರು.

ತಾಲೂಕಿನ ಸಂತೇಬೆನ್ನೂರು ಪೊಲೀಸ್ ಠಾಣಾ ಆವರಣದಲ್ಲಿ ಆಯೋಜಿಸಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದ ನೇತೃತ್ವ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು , ಆಶಾ ಕಾರ್ಯಕರ್ತೆಯರು ಗ್ರಾಮಗಳ ಪ್ರತಿ ಬೀದಿಗಳ ಪರಿಚಯ ಇದ್ದು, ಎಲ್ಲೆಲ್ಲಿ ಏನೇನು ನಡೆಯುತ್ತವೆ ಎಂಬುದರ ಬಗ್ಗೆ ತಮಗೆ ಸಂಪೂರ್ಣವಾಗಿ ಮಾಹಿತಿ ಇರುತ್ತದೆ. ತಾವೂ ಕೂಡ ಅಪರಾಧ ತಡೆಯುವ  ಬಗ್ಗೆ ಜಾಗೃತಿಯನ್ನು ಮೂಡಿಸಬಹುದು ಎಂದು ಅವರು ಇದೇ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಿಗೆ ಕರೆ ನೀಡಿದರು.

ಗ್ರಾಮದಲ್ಲಿ ಯಾವ ವ್ಯಕ್ತಿ ಅಪರಾಧ ಎಸಗುತ್ತಾನೆ ಎಂಬುದರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇದ್ದರೆ ತಕ್ಷಣ ಠಾಣೆಗೆ ದೂರವಾಣಿ ಕರೆಮಾಡಿ ತಿಳಿಸಿ , ನಿಮ್ಮ ಹೆಸರನ್ನು ಗೌಪ್ಯವಾಗಿಡಲಾಗುವುದು .ಈ ಭಾಗದಲ್ಲಿ ನಕಲಿ ಬಂಗಾರದ ಹಾವಳಿ ಇದ್ದು ಯಾಮರಿಸುವ ಕುತಂತ್ರ ಎಸಗುತ್ತಾರೆ ತುಂಬಾ ಎಚ್ಚರಿಕೆಯಿಂದ ಇರಬೇಕು. ಈ ರೀತಿಯ ಮಾಹಿತಿಗಳಿದ್ದರೆ ಠಾಣೆಗೆ ತಿಳಿಸಲು ಮರೆಯಬೇಡಿ ಎಂದು ಅವರು ಹೇಳಿದರು.

ಇತ್ತೀಚಿಗೆ ಸಾರ್ವಜನಿಕರು ಆನ್ಲೈನ್ ಕಳ್ಳರಿಂದ ಸಾಕಷ್ಠು ಜನ ಹಣವನ್ನು ಕಳೆದುಕೊಳ್ಳುತಿರುವುದನ್ನು ಕೇಳಿದ್ದೇವೆ.  ಆದ್ದರಿಂದ ಸೈಬರ್ ಆನ್ಲೈನ್ ಕಳ್ಳರಿಂದ ಬಹಳ ಎಚ್ಚರಿಕೆಯಿಂದ ಇರಬೇಕು. ಆನ್ ಲೈನ್ನಲ್ಲಿ ವಸ್ತುಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ. ಆನ್ ಲೈನ್ನಲ್ಲಿ ವಸ್ತು ಖರೀದಿಸಿದರೆ ಆ ವಸ್ತು ನಿಮಗೆ ಇಷ್ಟ ಇಲ್ಲದಿರಬಹುದು ವಾಪಸ್ಸು ಹಣ ಪಡೆಯಲು ತಿಳಿಯದೆ ಇರಬಹುದು ಇದಕ್ಕಾಗಿ ಕಂಜ್ಯೂಮರ್ ಕೋರಂ ಗೆ  ಅರ್ಜಿ ಸಲ್ಲಿಸಿದರೆ ನಿಮ್ಮ ಹಣ ನಿಮ್ಮ ಕೈಸೇರುತ್ತದೆ, ಕೆಲವರು ಪೋನ್ ಕರೆಯಿಂದ ತಮಗೆ ಮಿಸ್ಸಾಗಿ ನಮ್ಮ ಒಟಿಪಿ ನಂಬರು ಬಂದಿದೆ ಹೇಳಿ ಎನ್ನುತ್ತಾರೆ, ಯಾವುದೆ ಕಾರಣಕ್ಕೂ ಒ.ಟಿ.ಪಿ.  ನಂಬರ್ ನೀಡಬಾರದು ಎಂದು ಅವರು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.

ಮುಖ್ಯಮಂತ್ರಿ ಪ್ರಶಸ್ತಿ ಪದಕ ವಿಜೇತರಾಧ ಚನ್ನಗಿರಿ ವೃತ್ತ ನಿರೀಕ್ಷಕರಾದ ಆರ್ ಆರ್ ಪಾಟೀಲ್ ಮಾತನಾಡಿ, ಸಂಘರ್ಷಕ್ಕೆ ಒಳಗಾದ ಅಪ್ರಾಪ್ತ ಬಾಲಕಿ ತಾನು ಮಾಡದೇ ಇರುವ ತಪ್ಪಿಗೆ ಸಮಸ್ಯೆಯ ಸುಳಿಗೆ ಸಿಕ್ಕಿಕೊಂಡಾಗ  ಸಮಾಜವು ನೋಡುವ ದಾರಿ ಬದಲಾಗಬೇಕು. ಯಾವಾಗ ಸಮಾಜ ನೋಡುವ ದಾರಿ ಬದಲಾಗುತ್ತೋ ಅಂದು ಸಂಘರ್ಷಕ್ಕೊಳಗಾದ ಮಹಿಳೆ ಇರಬಹುದು ಬಾಲಕಿ ಇರಬಹುದು ಧೈರ್ಯವಾಗಿ ಠಾಣೆಗೆ ಬಂದು ತನಗಾದ ಸಮಸ್ಯೆಯ ಬಗ್ಗೆ ದೂರು ನೀಡಲು ಹಿಂಜರಿಯುವುದಿಲ್ಲಾ. ಕೆಲ ವರದಕ್ಷಿಣೆ ಕಿರುಕುಳ , ಮಹಿಳಾ ದೌರ್ಜನ್ಯದಂತ ಪ್ರಕರಣಗಳು ಪ್ರಾಥಮಿಕ ಹಂತದಲ್ಲಿ ಇಲಾಖೆಯ ಗಮನಕ್ಕೆ ತರಬೇಕು ಕೊನೆ ಘಳಿಗೆಯಲ್ಲಿ ಬಂದರೆ ಸಮಸ್ಯೆಗಳನ್ನು ಬಗೆ ಹರಿಸಲು ಕಷ್ಠವಾಗಬಹುದು ಎಂದರು.

ಎಂ.ಬಿ.ನಾಗರಾಜ್ ಕಾಕನೂರು ಸೈಬರ್ ಕ್ರೈಮ್ ಬಗ್ಗೆ  ಸವಿಸ್ತರವಾಗಿ ಮಾತನಾಡಿದರು. ರಸ್ತೆಯಲ್ಲಿ ಹೆಲ್ಮೆಟ್ ಧರಿಸದ  ದ್ವಿಚಕ್ರ ವಾಹನ ಸವಾರರನ್ನು ತಡೆದು  ಗುಲಾಬಿ ಹೂ ನೀಡಿ ಅಪರಾಧ ಹಾಗೂ ಅಪಘಾತದ ಬಗ್ಗೆ ವಾಹನ ಸವಾರರಿಗೆ ಡಿವೈಎಸ್ಪಿ ಪ್ರಶಾಂತ್ ಜಿ ಮುನ್ನೂಳಿ ಸಲಹೆ ನೀಡಿ ಹೆಲ್ಮೇಟ್ ಧರಿಸುವಂತೆ ಜಾಗೃತಿ ಮೂಡಿಸಿದರು.

ಮುಖ್ಯಮಂತ್ರಿ ಪದಕ ಪ್ರಶಸ್ತಿ ವಿಜೇತರಾದ ಚನ್ನಗಿರಿ ಸರ್ಕಲ್ ಇನ್ಸ್ ಪೆಕ್ಟರ್ ಆರ್.ಆರ್.ಪಾಟೀಲ್ . ಸಂತೇಬೆನ್ನೂರು ಪಿಎಸ್ ಐ ಜನಸ್ನೇಹಿ ಶಿವರುದ್ರಪ್ಪ ಎಸ್ ಮೇಟಿ, ವಿರೇಶ್ ಪ್ರಸಾದ್ ಪ್ರಜಾವಾಣಿ ವರದಿಗಾರರು, ಕಿರಣ್ ಕುಮಾರ್ , ವಿ.ಕ ವರದಿಗಾರರು , ಮಂಜನಾಯ್ಕ,  ಸಂಪನ್ಮೂಲ ವ್ಯಕ್ತಿ ಹಾಗೂ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷರಾದ ಎಂ.ಬಿ ನಾಗರಾಜ್ ಕಾಕನೂರು ,  ಸಂತೇಬೆನ್ನೂರು ಗ್ರಾಮಸ್ಥರು ಹಾಗೂ ಆಶಾ ಕಾರ್ಯಕರ್ತೆಯರು ಪೊಲೀಸ್ ಸಿಬ್ಬಂದಿ  ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಿಬ್ಬಂದಿ ಪ್ರಕಾಶ್ ನಿರೂಪಣೆ ಮಾಡಿ  ಆಂಜನೇಯ ವಂದಿಸಿದರು.`

ಇತ್ತೀಚಿನ ಸುದ್ದಿ