ಪತಿಯ ಸಾವಿನ ಸುದ್ದಿ ತಿಳಿದು ಪತ್ನಿ ಹೃದಯಾಘಾತದಿಂದ ಮೃತ್ಯು: ಸಾವಿನಲ್ಲೂ ಒಂದಾದ ದಂಪತಿ - Mahanayaka

ಪತಿಯ ಸಾವಿನ ಸುದ್ದಿ ತಿಳಿದು ಪತ್ನಿ ಹೃದಯಾಘಾತದಿಂದ ಮೃತ್ಯು: ಸಾವಿನಲ್ಲೂ ಒಂದಾದ ದಂಪತಿ

18/12/2020

ಚಿಕ್ಕಮಗಳೂರು: ಪತಿಯ ಸಾವಿನ ಸುದ್ದಿ ತಿಳಿದು ಪತ್ನಿಯೂ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ತಾಲೂಕಿನ ಗಾಳಿಹಳ್ಳಿ ಸಮೀಪ ನಡೆದಿದ್ದು, ವೃದ್ಧ ದಂಪತಿ ಸಾವಿನಲ್ಲೂ ಒಂದಾಗಿದ್ದು, ಇದೀಗ ಇಬ್ಬರ ಅಂತ್ಯಕ್ರಿಯೆಯನ್ನು ಒಟ್ಟಾಗಿ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

ಎರಡು ವರ್ಷಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದ  80 ವರ್ಷದ ದೊಡ್ಡ ರಾಜಣ್ಣ  ಅವರು ನಿನ್ನೆ ರಾತ್ರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.  ಈ ವಿಚಾರ ತಿಳಿಯುತ್ತಿದ್ದಂತೆಯೇ ಮನೆಯಲ್ಲಿದ್ದ 74 ವರ್ಷದ ರುದ್ರಮ್ಮ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.


Provided by

ಪತಿ ಸಾವನ್ನಪ್ಪಿದ ಸುದ್ದಿ ತಿಳಿದು, ಅವರ ಮೃತದೇಹ ಮನೆಗೆ ಮುಟ್ಟುವುದರೊಳಗೆ ಪತ್ನಿಯೂ ಸಾವನ್ನಪ್ಪಿದ್ದಾರೆ. ವಾರದ ಹಿಂದೆ ರುದ್ರಮ್ಮ ಅವರಿಗೂ ಸ್ಟ್ರೋಕ್ ಆಗಿತ್ತು.  ಇದಾದ ಬಳಿಕ ಇದೀಗ ಪತಿಯ ಸಾವಿನ ಸುದ್ದಿ ಕೇಳಿ ಹೃದಯಾಘಾತಕ್ಕೊಳಗಾಗಿದ್ದು, ಇವರಿಬ್ಬರ ಅಂತ್ಯಕ್ರಿಯೆ ಜೊತೆಯಾಗಿ ನಡೆಸಲು ಸಿದ್ಧತೆ ನಡೆದಿದೆ.

ಇತ್ತೀಚಿನ ಸುದ್ದಿ