ಎಟಿಎಂನಲ್ಲಿ ಪತ್ನಿಯನ್ನು ಗುಂಡಿಟ್ಟು ಕೊಂದ, ಮನೆಗೆ ತೆರಳಿ ಸಹೋದರನ ಮೇಲೂ ಗುಂಡು ಹಾರಿಸಿದ ಪಾಪಿ! - Mahanayaka

ಎಟಿಎಂನಲ್ಲಿ ಪತ್ನಿಯನ್ನು ಗುಂಡಿಟ್ಟು ಕೊಂದ, ಮನೆಗೆ ತೆರಳಿ ಸಹೋದರನ ಮೇಲೂ ಗುಂಡು ಹಾರಿಸಿದ ಪಾಪಿ!

aleya
27/02/2024

ಉತ್ತರ ಪ್ರದೇಶ: ಹೆಚ್.ಡಿ.ಎಫ್.ಸಿ. ಬ್ಯಾಂಕ್ ನ ಎಟಿಎಂನೊಳಗೆ ನುಗ್ಗಿ ತನ್ನ ಗರ್ಭಿಣಿ ಪತ್ನಿಯನ್ನು ವ್ಯಕ್ತಿಯೋರ್ವ ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ನಡೆದಿದೆ.

ಆಲಿಯಾ ಮೃತ ಮಹಿಳೆಯಾಗಿದ್ದು, ಈಕೆಯ ಪತಿ ಜೀಶಾನ್ ಹತ್ಯೆ ನಡೆಸಿದ ಆರೋಪಿಯಾಗಿದ್ದಾನೆ. ಪತ್ನಿಯ ಶೀಲವನ್ನು ಶಂಕಿಸಿ ಆರೋಪಿ ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗಿದೆ.

ಆರೋಪಿಯು ತನ್ನ ಪತ್ನಿ ಹಾಗೂ ತನ್ನ ಕಿರಿಯ ಸಹೋದರನಿಗೆ ಅಕ್ರಮ ಸಂಬಂಧ ಇರೋದಾಗಿ ಶಂಕಿಸಿದ್ದ. ತನ್ನ ಪತ್ನಿ ಗರ್ಭಧರಿಸಲು ತನ್ನ ಕಿರಿಯ ಸಹೋದರ ಕಾರಣ ಎಂದು ಆತ ಶಂಕಿಸಿದ್ದ. ಇದರಿಂದಾಗಿ ಪತ್ನಿಯನ್ನು ಹತ್ಯೆ ಮಾಡಲು ಸ್ಕೆಚ್ ಹಾಕಿದ್ದ.

ಮಂಗಳವಾರ ಬೆಳಗ್ಗೆ 8: 30 ರಿಂದ 9 ಗಂಟೆಯ ನಡುವೆ ಮಂಡಿ ಠಾಣಾ ವ್ಯಾಪ್ತಿಯ ಹೆಚ್ ಡಿ ಎಫ್ ಸಿ ಬ್ಯಾಂಕ್ ನ ಎಟಿಎಂನೊಳಗಿದ್ದ ಪತ್ನಿ ಆಲಿಯಾಳನ್ನು ಪತಿ ಜೀಶಾನ್ ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಕೃತ್ಯದ ಬಳಿಕ ಮನೆಗೆ ಬಂದ ಜೀಶಾನ್ ತನ್ನ ಕಿರಿಯ ಸಹೋದರನ ಮೇಲೆಯೂ ಗುಂಡು ಹಾರಿಸಿದ್ದು, ಗುಂಡು ಆತನ ಕುತ್ತಿಗೆಗೆ ತಗಲಿದ್ದು, ಆತನನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತ ಅಪಾಯದಿಂದ ಪಾರಾಗಿದ್ದಾನೆ.

ಘಟನೆ ಸಂಬಂಧ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಅಲ್ಲದೇ ಎಟಿಎಂನಲ್ಲಿರುವ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿದ್ದಾರೆ.

ಇನ್ನೂ ಘಟನೆಯ ಬಳಿಕ ಆರೋಪಿ ಪರಾರಿಯಾಗಿದ್ದು, ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ