ಬಡ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸರ್ಕಾರಿ ನೌಕರರಿಗೆ ಮಾದರಿಯಾದ ಪೊಲೀಸ್ ಅಧಿಕಾರಿ - Mahanayaka

ಬಡ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸರ್ಕಾರಿ ನೌಕರರಿಗೆ ಮಾದರಿಯಾದ ಪೊಲೀಸ್ ಅಧಿಕಾರಿ

20/10/2020

ನವದೆಹಲಿ: ದೆಹಲಿಯ ಪೊಲೀಸ್ ಅಧಿಕಾರಿಯೊಬ್ಬರು  ಬಡ ಮಕ್ಕಳಿಗೆ ತಾವೇ ಶಿಕ್ಷಣವನ್ನು ನೀಡುವ ಮೂಲಕ ಮಾದರಿಯಾಗಿದ್ದು,  ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಇದನ್ನು ಮನಗಂಡ ಪೊಲೀಸ್, ಬಡ ಮಕ್ಕಳಿಗೆ ತಾವೇ ಶಿಕ್ಷಣ ಕಲಿಸುವುದರ ಮೂಲಕ ಸರ್ಕಾರಿ ನೌಕರರಿಗೆ ಮಾದರಿಯಾಗಿದ್ದಾರೆ.

ಕೊರೊನಾದಿಂದಾಗಿ ಜನರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಈ ನಡುವೆ ಆನ್ ಲೈನ್ ಶಿಕ್ಷಣ ಎಂಬೆಲ್ಲ ಹೊಸ ಹೊಸ ಮಾತುಗಳು ಬಡವರ ಪಾಲಿಗಂತೂ ಅಚ್ಚರಿಯ ಸಂಗತಿ ಮಾತ್ರವಾಗಿ ಉಳಿದಿದೆ. ಮಕ್ಕಳ ಓದಿನ ಬಗ್ಗೆ ಆತಂಕ ಒಂದೆಡೆಯಾದರೆ, ಇನ್ನೊಂದೆಡೆಯಲ್ಲಿ ಮಕ್ಕಳಿಗೆ ಆನ್ ಲೈನ್ ಶಿಕ್ಷಣಕ್ಕೆ ಮೊಬೈಲ್ ಗಳನ್ನು ತರುವ ತಲೆ ಬಿಸಿಯಾಗಿದೆ. ಇಂತಹ ಸಂದರ್ಭದಲ್ಲಿ ಪೊಲೀಸ್  ಥಾನ್​ ಸಿಂಗ್​​ ಎಂಬವರು ಮಕ್ಕಳಿಗೆ ತಾವೇ ಶಿಕ್ಷಣ ಹೇಳಿಕೊಡುವ ಮೂಲಕ ಮಾದರಿಯಾಗಿದ್ದಾರೆ.

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿಕೊಂಡು ಮಕ್ಕಳಿಗೆ ಥಾನ್​ ಸಿಂಗ್​​ ಪಾಠ ಮಾಡುತ್ತಿದ್ದಾರೆ. ಕೊರೊನಾದಿಂದ ಶಾಲೆಗಳು ಮುಚ್ಚಿವೆ. ಮಕ್ಕಳ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ನಾನು ಈ ಕೆಲಸ ಮಾಡುತ್ತಿದ್ದೇನೆ ಎಂದು ಥಾನ್​ ಸಿಂಗ್​​ ಹೇಳಿದ್ದಾರೆ.

ಇತ್ತೀಚಿನ ಸುದ್ದಿ