ಅಪಘಾತಕ್ಕೀಡಾದ ಕಾರಿನಲ್ಲಿ ಸಿ.ಟಿ.ರವಿ ಕ್ಯಾಲೆಂಡರ್, ಮದ್ಯ ಪತ್ತೆ: ಓಟಿ ರವಿ ಎಂದು ಘೋಷಣೆ ಕೂಗಿದ ಸಾರ್ವಜನಿಕರು - Mahanayaka

ಅಪಘಾತಕ್ಕೀಡಾದ ಕಾರಿನಲ್ಲಿ ಸಿ.ಟಿ.ರವಿ ಕ್ಯಾಲೆಂಡರ್, ಮದ್ಯ ಪತ್ತೆ: ಓಟಿ ರವಿ ಎಂದು ಘೋಷಣೆ ಕೂಗಿದ ಸಾರ್ವಜನಿಕರು

c t ravi
27/03/2023

ಚಿಕ್ಕಮಗಳೂರು: ಕಾರೊಂದು ಬ್ರೇಕ್ ಡೌನ್ ಆಗಿ ಅಪಘಾತಕ್ಕೀಡಾಗಿದ್ದು, ಈ ವೇಳೆ ಕಾರಿನಲ್ಲಿ ಸಿ.ಟಿ.ರವಿ ಅವರ ಕ್ಯಾಲೆಂಡರ್ ಹಾಗೂ ಮದ್ಯ, ಕ್ಯಾಲೆಂಡರ್, ಲಾಂಗ್, ಅನ್ನ ಪತ್ತೆಯಾಗಿದೆ.

ಚಿಕ್ಕಮಗಳೂರು ನಗರದ ಎಐಟಿ ಸರ್ಕಲ್ ನಲ್ಲಿ  ತಡ ರಾತ್ರಿ ನಡೆದ ಘಟನೆ ನಡೆದಿದೆ. ಮದ್ಯದ ಜೊತೆಗೆ ಸಿ.ಟಿ.ರವಿ ಅವರ ಕ್ಯಾಲೆಂಡರ್ ಪತ್ತೆಯಾಗಿರುವುದನ್ನು ಕಂಡ ಸಾರ್ವಜನಿಕರು, ಮದ್ಯ ಹಂಚಿ ಸಿ.ಟಿ.ರವಿ ವೋಟು ಕೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.

ಅಪಘಾತಕ್ಕೀಡಾದ ಕಾರನ್ನು ಸಾರ್ವಜನಿಕರು ತಳ್ಳಲು ಮುಂದಾದಾಗ ಕಾರಿನಲ್ಲಿ ಸಿ.ಟಿ.ರವಿ ಅವರ ಕ್ಯಾಲೆಂಡರ್ ಹಾಗೂ ಮದ್ಯ ಇರುವುದು ಪತ್ತೆಯಾಗಿತ್ತು. ಈ ಬಗ್ಗೆ ಸಾರ್ವಜನಿಕರು ಕಾರಿನ ಚಾಲಕನನ್ನು ವಿಚಾರಿಸಿದಾಗ ಸಾರ್ವಜನಿಕರು ಹಾಗೂ ಚಾಲಕನ ನಡುವೆ ಮಾತಿನ ಚಕಮಕಿ ನಡೆದಿದೆ. ಸ್ಥಳೀಯರು ಇನ್ನಷ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆಯೇ ಕಾರಿನ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಸಿ.ಟಿ.ರವಿ ಮದ್ಯ ಹಂಚಿ ವೋಟು ಕೇಳುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ ಸಾರ್ವಜನಿಕರು ಓಟಿ ರವಿ ಘೋಷಣೆ ಕೂಗಿದರು. ಸ್ಥಳಕ್ಕೆ ನಗರ ಠಾಣಾ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ.

ನಿನ್ನೆಯಷ್ಟೇ ಸಿ.ಟಿ.ರವಿ ಸಿಎಂ ಆಗಬೇಕು ಎಂದು ಅಭಿಮಾನಿಗಳು ಹರಕೆ ಹೊತ್ತು ಪಾದಯಾತ್ರೆ ಮಾಡಿದ್ದರು, ಅದೇ ದಿನ ರಾತ್ರಿ ಇಂತಹದ್ದೊಂದು ಘಟನೆ ನಡೆದಿದೆ. ಈ ಘಟನೆ ಇದೀಗ ನಾನಾ ಚರ್ಚೆಗಳಿಗೆ ಕಾರಣವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ