'ಅಶೋಕ ವಿಜಯ ದಶಮಿ' | ಇದುವೇ ನಿಜವಾದ ವಿಜಯ ದಶಮಿ - Mahanayaka

‘ಅಶೋಕ ವಿಜಯ ದಶಮಿ’ | ಇದುವೇ ನಿಜವಾದ ವಿಜಯ ದಶಮಿ

25/10/2020

ಇಂದು ಅಶೋಕ ವಿಜಯ ದಶಮಿ. ಸಾಮ್ರಾಟ್ ಅಶೋಕ ಚಕ್ರವರ್ತಿ ಕಳಿಂಗ ಯುದ್ಧದ ಬಳಿಕ ತನ್ನೊಳಗಿನ ಯುದ್ಧದಲ್ಲಿ ಗೆದ್ದು ಹಿಂಸೆಯನ್ನು ತ್ಯಜಿಸಿದ ಐತಿಹಾಸಿಕ ದಿನ.  ಕಳಿಂಗ ಯುದ್ಧದಲ್ಲಿ ಗೆದ್ದ ಬಳಿಕ 10 ದಿನಗಳ ನಂತರ ಅಶೋಕ ಬೌದ್ಧ ಧರ್ಮವನ್ನು ಸ್ವೀಕರಿಸುತ್ತಾನೆ. ಹೀಗಾಗಿ ಈ 10 ದಿನಗಳಿಗೆ ವಿಶೇಷವಾದ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಹೀಗಾಗಿಯೇ ವಿಜಯ ದಶಮಿ ಎಂಬ ಪದ ಚಾಲ್ತಿಗೆ ಬಂತು.

ಅಶೋಕ ವಿಜಯದಶಮಿ ಬೌದ್ಧರ ಪ್ರಸಿದ್ಧ ಹಬ್ಬವಾಗಿದೆ. ಸಾಮ್ರಾಟ್ ಅಶೋಕ ಚಕ್ರವರ್ತಿಯ ಸಿಂಹಾಸನಾರೋಹಣವಾದ 8ನೇ ವರ್ಷದಲ್ಲಿ ಕ್ರಿ.ಪೂ. 261-262 ರಲ್ಲಿ ಕಳಿಂಗದ ಮೇಲೆ ತನ್ನ ಬಲಾಢ್ಯ ಸೈನ್ಯದೋಂದಿಗೆ ದಾಳಿ ಮಾಡುತ್ತಾನೆ. ಕಳಿಂಗದ ರಾಜನ ಶುದ್ಧಧರ್ಮ  ಅಥವಾ ಮೃಗೇಂದ್ರ ಅಥವಾ ಖಾರವೇಲ ಹಾಗೂ ಅಶೋಕ ಚಕ್ರವರ್ತಿಯ ಸೈನ್ಯದ ನಡುವೆ ದೌಲಿ ಎಂಬ ಸ್ಥಳದಲ್ಲಿ ಭೀಕರ ಯುದ್ಧವಾಗುತ್ತದೆ. ಈ ಯುದ್ಧದ ಬಗ್ಗೆ 13ನೇ ಶಾಸನದಲ್ಲಿ ವಿವರಣೆಗಳಿವೆ. ಈ ಯುದ್ಧದಲ್ಲಿ 1,50,000 ಜನರು ಬಂಧಿಗಳಾದರು . 1,00,000 ಜನರು ಗಾಯಗೊಂಡರು ಭಾರೀ ಸಂಖ್ಯೆಯಲ್ಲಿ ಸೈನಿಕರು ಸಾವನ್ನಪ್ಪುತ್ತಾರೆ.

ಈ ಹಿಂಸೆಯನ್ನು ಕಣ್ಣಾರೆ ಕಂಡ ಅಶೋಕ ಮರುಗುತ್ತಾನೆ. ಆ ರಕ್ತಪಾತ, ತಂದೆಯನ್ನು ಕಳೆದುಕೊಂಡ ಮಕ್ಕಳ ರೋದನ, ಗಂಡನನ್ನು ಕಳೆದುಕೊಂಡ ಪತ್ನಿ ರೋದನ, ಇವೆಲ್ಲವೂ ಅಶೋಕ ಚಕ್ರವರ್ತಿಯ ಕಣ್ಣನ್ನು ತೆರೆಸುತ್ತದೆ. ಹೀಗಾಗಿ ಯುದ್ಧದಿಂದಾಗುವ ರಕ್ತಪಾತಗಳನ್ನು ಕೈಬಿಟ್ಟು, ಶಾಂತಿ, ಅಹಿಂಸೆಯ ಮಾರ್ಗವನ್ನು ಅನುಸರಿಸಲು ಕಳಿಂಗ ಯುದ್ಧದ 10 ದಿನಗಳ ಬಳಿಕ ಅಶೋಕ ಚಕ್ರವರ್ತಿ ಬೌದ್ಧ ಧರ್ಮವನ್ನು ಸ್ವೀಕರಿಸುತ್ತಾನೆ. ಹಿಂಸೆಯನ್ನು ಬಿಟ್ಟು ಶಾಂತಿ, ಅಹಿಂಸೆಯ ಕಡೆಗೆ ಅಶೋಕ ಚಕ್ರವರ್ತಿ ಬಂದ ಪವಿತ್ರ ದಿನವನ್ನು ಅಶೋಕ ವಿಜಯ ದಶಮಿ ಎಂದೇ ಕರೆಯುತ್ತಾರೆ.

ಅಶೋಕ ಬೌದ್ಧ ಧರ್ಮ ಸ್ವೀಕರಿಸಿದ ಬಳಿಕ ಸಾವಿರಾರು ಸ್ತೂಪ, ಧಮ್ಮ ಸ್ಥಂಬ, ಶಿಲಾಲೇಖಗಳನ್ನು ನಿರ್ಮಾಣ ಮಾಡುತ್ತಾನೆ ಮತ್ತು. ತನ್ನ ರಾಜ ಧರ್ಮವಾಗಿ ಬೌದ್ಧ ಧರ್ಮವನ್ನು ಅಳವಡಿಸಿಕೊಳ್ಳುತ್ತಾನೆ.  ತನ್ನ ಸಾಮ್ರಾಜ್ಯದಲ್ಲಿ ಬೌದ್ಧ ಧರ್ಮವನ್ನು ಪ್ರಚಾರ ಮಾಡುತ್ತಾನೆ. ಆದರೆ ಎಲ್ಲೂ ಯಾರನ್ನೂ ಬಲವಂತವಾಗಿ ಬೌದ್ಧ ಧರ್ಮಕ್ಕೆ ಸೇರಿದೇ, ನಿಜವಾದ ಬೌದ್ಧನಾಗುತ್ತಾನೆ.

ಮಹಾನಾಯಕ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ

https://t.me/joinchat/Q8oMxBZkakVUy7-VpEsIXQ

Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ