ಭಾರತವನ್ನು ಕೊಳಕು, ಹೊಲಸು ಎಂದು ಹೇಳಿದ್ದ ಟ್ರಂಪ್ ಗೆಲುವಿಗಾಗಿ ಹಿಂದೂ ಕಾರ್ಯಕರ್ತರಿಂದ ವಿಶೇಷ ಪೂಜೆ! - Mahanayaka
5:38 PM Thursday 16 - January 2025

ಭಾರತವನ್ನು ಕೊಳಕು, ಹೊಲಸು ಎಂದು ಹೇಳಿದ್ದ ಟ್ರಂಪ್ ಗೆಲುವಿಗಾಗಿ ಹಿಂದೂ ಕಾರ್ಯಕರ್ತರಿಂದ ವಿಶೇಷ ಪೂಜೆ!

03/11/2020

ನವದೆಹಲಿ: ಭಾರತವನ್ನು ಕೊಳಕು ಎಂದು ಕರೆದಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಹಿಂದೂ ಸಂಘಟನೆಗಳು ಪ್ರಾರ್ಥನೆ ಸಲ್ಲಿಸಿದ್ದಾರೆ.  


ದೆಹಲಿಯ ದೇವಸ್ಥಾನದಲ್ಲಿ ಟ್ರಂಪ್ ಗೆಲುವಿಗಾಗಿ ಮಂಗಳವಾರ ಪೂಜೆ ಸಲ್ಲಿಸಿದ ಹಿಂದೂ ಕಾರ್ಯಕರ್ತರು, ದೆಹಲಿಯಲ್ಲಿನ ದೇವಸ್ಥಾನವೊಂದರಲ್ಲಿ ಅರ್ಚಕರ ಸಮ್ಮುಖದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಿದರು.  



ADS

ಸುಮಾರು 30 ನಿಮಿಷಗಳ ಕಾಲ ಹಿಂದೂ ಸಂಪ್ರದಾಯಗಳಿಗೆ ಅನುಗುಣವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಹಿಂದೂ ಸೇನಾ, ಡೊನಾಲ್ಡ್ ಟ್ರಂಪ್ ಅವರಿಗೆ ಆಶೀರ್ವಾದ ನೀಡುವಂತೆ ದೇವರನ್ನು ಕೋರಲಾಯಿತು ಎಂದು ವರದಿಯಾಗಿದೆ.  


ಈ ಸಂದರ್ಭ ಮಾತನಾಡಿದ ಹಿಂದೂ ಸೇನಾ ಅಧ್ಯಕ್ಷ ವಿಷ್ಣು ಗುಪ್ತ, ‘ಕಳೆದ ಚುನಾವಣೆಯಲ್ಲಿಯೂ ನಾವು ಟ್ರಂಪ್ ಅವರ ಗೆಲುವಿಗಾಗಿ ಪ್ರಾರ್ಥಿಸಿದ್ದೆವು. ಈ ಬಾರಿ ಕೂಡ ಅವರ ಗೆಲುವಿಗಾಗಿ ನಾವು ದೇವರ ಆಶೀರ್ವಾದ ಕೋರಿದ್ದೇವೆ. ಅವರ ಗೆಲುವು ಜಗತ್ತಿಗೆ ಮಾತ್ರ ಗೆಲುವಲ್ಲ, ಭಾರತಕ್ಕೂ ಕೂಡ ಎಂದು ಹೇಳಿದ್ದಾರೆ.  


ಇತ್ತೀಚಿನ ಸುದ್ದಿ