ಯು.ಟಿ.ಖಾದರ್ ಕಾರನ್ನು ಹಿಂಬಾಳಿಸಿದ ಓರ್ವ ಆರೋಪಿ ಅರೆಸ್ಟ್ - Mahanayaka

ಯು.ಟಿ.ಖಾದರ್ ಕಾರನ್ನು ಹಿಂಬಾಳಿಸಿದ ಓರ್ವ ಆರೋಪಿ ಅರೆಸ್ಟ್

24/12/2020

ಮಂಗಳೂರು:  ಮಾಜಿ ಸಚಿವ ಯು.ಟಿ.ಖಾದರ್ ಅವರ ಕಾರನ್ನು ನಿನ್ನೆ ಹಿಂಬಾಳಿಸಿದ್ದ ಇಬ್ಬರು ವ್ಯಕ್ತಿಗಳ ಬಗ್ಗೆ ದೂರು ನೀಡಲಾಗಿತ್ತು. ಇದೀಗ ಆರೋಪಿಗಳಲ್ಲಿ ಓರ್ವನನ್ನು  ಕದ್ರಿ ಪೊಲೀಸರು ಬಂಧಿಸಿದ್ದಾರೆ.


Provided by

ಆರೋಪಿಯನ್ನು ಬೋಳೂರು ನಿವಾಸಿ ಅನೀಶ್ ಪೂಜಾರಿ ಎಂದು ಗುರುತಿಸಲಾಗಿದೆ. ನಿನ್ನೆ ಯು.ಟಿ.ಖಾದರ್ ಅವರ ಕಾರನ್ನು ಹಿಂಬಾಳಿಸಿಕೊಂಡು ಬಂದಿದ್ದ ಇಬ್ಬರು ಯುವಕರ ಪೈಕಿ ಅನೀಶ್ ಪೂಜಾರಿ ಓರ್ವನಾಗಿದ್ದಾನೆ ಎಂದು ತಿಳಿದು ಬಂದಿದೆ.

ಯು.ಟಿ.ಖಾದರ್ ಕಾರು ಹಿಂಬಾಳಿಸಿಕೊಂಡು ಬಂದಿದ್ದ ಆರೋಪಿಗಳ ಬೈಕ್ ನ ನಂಬರ್  ವಿಳಾಸದ ಆಧಾರದಲ್ಲಿ ಪೊಲೀಸರು, ಅನೀಶ್ ಪೂಜಾರಿಯನ್ನು ಬಂಧಿಸಿದ್ದಾರೆ. ಆರೋಪಿಯು ಖಾದರ್ ಅವರ ಕಾರನ್ನು ಯಾಕೆ ಹಿಂಬಾಳಿಕೊಂಡು ಬಂದಿದ್ದಾನೆ ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.


Provided by

ಇತ್ತೀಚಿನ ಸುದ್ದಿ