ಇದ್ದ ಒಬ್ಬ ಮಗ ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲು | ಯುವಕನ ಪ್ರಾಣ ಉಳಿಸಲು ನೀವು ನೆರವಾಗುವಿರಾ?
ಶಿರಾಡಿ: ಅವರ ಹೆಸರು ನಯನ್ ಶಿರಾಡಿ. ಲಾರಿ ಚಾಲಕರಾಗಿ ದುಡಿಯುತ್ತಿದ್ದ ಅವರು, ತಮ್ಮ ಕುಟುಂಬಕ್ಕೆ ಆಸರೆಯಾಗಿದ್ದರು. ತಂದೆ ತಾಯಿಯ ಒಬ್ಬನೇ ಮಗನಾಗಿರುವ ಅವರ ಜೀವನದಲ್ಲಿ ನಡೆದ ಒಂದು ಅಪಘಾತ ಅವರ ಕುಟುಂಬದ ಸಂತೋಷವನ್ನೇ ಕಿತ್ತುಕೊಂಡಿದೆ.
ಹೌದು..! ನಯನ್ ಶಿರಾಡಿ ಅಕ್ಟೋಬರ್ 17ರಂದು ಸುಬ್ರಹ್ಮಣ್ಯ-ಗುಂಡ್ಯ ರಾಜ್ಯ ಹೆದ್ದಾರಿಯಲ್ಲಿ ಬೈಕ್ ನಲ್ಲಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಅಪಘಾತಕ್ಕೀಡಾಗಿದ್ದಾರೆ. ಅಪಘಾತದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಚಾಲಕರಾಗಿ ದುಡಿಯುತ್ತಿದ್ದ ನಯನ್ ಅವರ ಕುಟುಂಬವು ಇದೀಗ ತಮ್ಮ ಮಗನಿಗೆ ಆಗಿರುವ ಪರಿಸ್ಥಿತಿ ಕಂಡು ತೀವ್ರವಾಗಿ ನೊಂದಿದ್ದಾರೆ. ಮಗನ ಚಿಕಿತ್ಸೆಗೆ ಹಣ ಹೊಂದಿಸಲು ಪರದಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಸಹೃದಯಿ ದಾನಿಗಳು ನೆರವು ನೀಡಲು ಅವರ ಸ್ನೇಹಿತ ಬಳಗ ಮನವಿ ಮಾಡಿಕೊಂಡಿದ್ದಾರೆ. ನಿಮ್ಮ ಸಣ್ಣ ಸಹಾಯವೂ ಒಂದು ಜೀವ ಉಳಿಸಲು, ಒಂದು ಕುಟುಂಬದ ಆಧಾರ ಸ್ತಂಭವಾಗಿರುವ ಯುವಕನನ್ನು ಉಳಿಸಲು ಸಹಾಯಕವಾಗಿದೆ. ಹಾಗಾಗಿ ಸಹೃದಯಿಗಳು ಈ ಯುವಕನಿಗೆ ನೆರವು ನೀಡಲು ಮನವಿ ಮಾಡಲಾಗಿದೆ.
ನೆರವು ನೀಡುವವರು ಈ ಬ್ಯಾಂಕ್ ವಿವರಗಳಿಗೆ ನೆರವು ನೀಡಬಹುದಾಗಿದೆ.
Name: ದೀಕ್ಷಿತ್
Ac No : 38207708643
IFSC : SBIN007135
Branch : ಶಿರಾಡಿ
Google pay No: 9482313316
Disclaimer:
www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.