ಚಿತ್ರಮಂದಿರಗಳಲ್ಲಿ ರಂಗಿತರಂಗ ರೀ ರಿಲೀಸ್ | ಕಾರಣ ಏನು ಗೊತ್ತಾ? - Mahanayaka

ಚಿತ್ರಮಂದಿರಗಳಲ್ಲಿ ರಂಗಿತರಂಗ ರೀ ರಿಲೀಸ್ | ಕಾರಣ ಏನು ಗೊತ್ತಾ?

30/10/2020

ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದ ಕನ್ನಡದ ಚಿತ್ರ ರಂಗಿತರಂಗ  ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ಲಭಿಸಿದೆ. ರಂಗಿತರಂಗ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿತ್ತು.  ಈ ಸಿನಿಮಾವನ್ನು ನೀವು ಮತ್ತೆ ಟಾಕೀಸ್ ನಲ್ಲಿ ನೋಡಲು ಚಿತ್ರತಂಡ ಮತ್ತೆ ಅವಕಾಶ ಮಾಡಿಕೊಡಲಿದೆ.


ಚಿತ್ರಮಂದಿರಗಳು ತೆರೆದು ಕೆಲವು ದಿನಗಳಾದರೂ,  ಲಾಕ್ ಡೌನ್ ನ ಬಳಿಕದ ಸಂಕಷ್ಟದ ಈ ಸಂದರ್ಭದಲ್ಲಿ ಯಾವುದೇ ಚಿತ್ರಗಳನ್ನು ಬಿಡುಗಡೆ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಜನರಂತೂ ಚಿತ್ರಗಳನ್ನು ನೋಡುವ ಸ್ಥಿತಿಯಲ್ಲಿಲ್ಲ. ಇದೇ ಸಂದರ್ಭದಲ್ಲಿ ಹಳೆಯ ಚಿತ್ರಗಳನ್ನು ಮತ್ತೆ ಬಿಡುಗಡೆ ಮಾಡಲು ಚಿತ್ರತಂಡಗಳು ಮುಂದಾಗಿವೆ.


ಕೊವಿಡ್ ನಂತರದಲ್ಲಿ ಚಿತ್ರಮಂದಿರಗಳು ತೆರೆದಾಗ ಸಿನಿ ಪ್ರೇಕ್ಷಕರು ಯಾವ ರೀತಿಯಾಗಿ ಪ್ರತಿಕ್ರಿಯಿಸುತ್ತಾರೆ ಎನ್ನುವ ಟೆಸ್ಟ್ ಎಂದೂ ಇದನ್ನು ಹೇಳಬಹುದಾಗಿದೆ.  ಹೀಗಾಗಿ ಹಿಟ್ ಚಿತ್ರಗಳನ್ನು  ಮತ್ತೆ ಬಿಡುಗಡೆ ಮಾಡಲು ಮುಂದಾಗಿದೆ ಈ ಪೈಕಿ ರಂಗಿತರಂಗ ಚಿತ್ರ ಪ್ರಮುಖ ಚಿತ್ರವಾಗಿದೆ.


Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ